ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಸ್ವಾಗತ

ಮಂಗಳೂರು: ನಗರದ ಬಾವುಟಗುಡ್ಡದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯು ಸೋಮವಾರ ಸಂಜೆ ರಾ.ಹೆ.66ರ ಪಡೀಲ್ ಮೂಲಕ ಮಂಗಳೂರು ನಗರ ಪ್ರವೇಶಿಸಿತು.
ಪಡೀಲ್ ಜಂಕ್ಷನ್‌ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪುಷ್ಪವೃಷ್ಠಿಗೈದು ಗೌರವ ಸಲ್ಲಿಸಿದರು. ಈ ಸಂದರ್ಭ ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು, ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಪಿ.ಡಿ., ಕೋಶಾಧಿಕಾರಿ ಶಿವರಾಂ ನಿನ್ನಿಕಲ್ ಮತ್ತಿತರರು ಉಪಸ್ಥಿತರಿದ್ದರು.










