ಭಟ್ಕಳ | ಮೀನುಗಾರಿಕಾ ದೋಣಿ ಮುಳುಗಡೆ: ಓರ್ವ ನಾಪತ್ತೆ; ಇಬ್ಬರ ರಕ್ಷಣೆ

ಭಟ್ಕಳ, ಆ.30: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, (Missing) ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರ ಜಾಲಿ ನಿವಾಸಿ ನಾಗರಾಜ ರಾಮಕೃಷ್ಣ ಮೊಗೇರ ಎಂದು ತಿಳಿದುಬಂದಿದೆ. ರವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂಬವರನ್ನು ರಕ್ಷಿಸಲಾಗಿದೆ. ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ಮುಂದುವರಿದಿದೆ.
Next Story





