ಬಾವುಟಗುಡ್ಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ

ಮಂಗಳೂರು; ಬ್ರಿಟಿಷರ ವಿರುದ್ಧದ ರೈತರ ಹೋರಾಟದ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಇಂದು ಬೆಳಗ್ಗೆ ಮಂಗಳೂರಿನ ಐತಿಹಾಸಿಕ ಸ್ಥಳವಾದ ಬಾವುಟ ಗುಡ್ಡದ ಲೈಟ್ ಹೌಸ್ ಗೋಪುರದ ಬಳಿ ನಿರ್ಮಿಸಲಾದ ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು.
ಸಂಗ್ರಾಮದ ಸಂದರ್ಭದಲ್ಲಿ ಕರಾವಳಿ, ಮಲೆನಾಡಿನ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ನಡೆದ ರೈತರ ಹೋರಾಟದ ಕೇಂದ್ರ ಸ್ಥಾನವಾದ ಈಗಿನ ಬಾವುಟ ಗುಡ್ಡದಲ್ಲಿ ಮುಂಚೂಣಿ ಯಲ್ಲಿ ದ್ದ ರೈತ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆಂಧ್ರ ಪ್ರದೇಶದ ವಿಜಯ ವಾಡದಲ್ಲಿ ನಿರ್ಮಾಣ ಗೊಂಡಿದೆ.
ಸುಮಾರು 40ಲಕ್ಷ ರೂ ಮೊತ್ತದದಲ್ಲಿ ನಿರ್ಮಿಸಲಾದ (ಮನಪಾ 30ಲಕ್ಷ ಮತ್ತು ಕನ್ನಡ ಸಂಸ್ಕೃತಿ ಇಲಾಖೆ 10ಲಕ್ಷ ರೂ) ಪ್ರತಿಮೆ ಆದಿ ಚುಂಚನ ಗಿರಿಯಿಂದ ಹೊರಟು ಕೊಡಗು ಜಿಲ್ಲೆಯ ನ್ನು ಪ್ರವೇಶಿಸಿ ಸುಳ್ಯ ದ ಮೂಲಕ 29ರಂದು ಮಂಗಳೂರು ನಗರಕ್ಕೆ ಆಗಮಿಸಿದೆ.
ಇಂದು ಪ್ರತಿಮೆ ಯನ್ನು ಮಂಗಳೂರು ಮಹಾ ನಗರ ಪಾಲಿಕೆಯ ಟಾಗೋರ್ ಪಾರ್ಕ್ ನ ಬಾವುಟ ಗುಡ್ಡದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಪೀಠದಲ್ಲಿ ಕ್ರೇನ್ ನ ಸಹಾಯದಿಂದ ಪ್ರತಿಮೆಯನ್ನು ಪ್ರತಿಷ್ಠಾಪಿಸ ಲಾಯಿತು.







