ರೈತರ ಸಾಲ ಮರು ಹೊಂದಾಣಿಕೆಯಲ್ಲಿ ಅವ್ಯವಹಾರ: ರಮೇಶ್ ಬಾಬು ಆರೋಪ

ಬೆಂಗಳೂರು, ಆ.30: ರೈತರ ಸಾಲ ಮರು ಹೊಂದಾಣಿಕೆ ನವೀಕರಣ ದಂಧೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಾಲ ವಿತರಣೆ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕಾನೂನು ಸಚಿವರೇ ಸಾಲ ನವೀಕರಣಕ್ಕೆ ಲಂಚ ನೀಡಿರುವುದಾಗಿ ಹೇಳುತ್ತಾರೆ. ಲಂಚದ ಸರಕಾರ, ಮಂಚದ ಸರಕಾರ, ಭ್ರಷ್ಟರ ಸರಕಾರ, ರೈತ ವಿರೋಧಿ ಸರಕಾರ 'ಎಂದು ಟೀಕಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, 'ನಿಮ್ಮ ಪ್ರಣಾಳಿಕೆಯಲ್ಲಿ ಸಹಕಾರಿ - ರಾಷ್ಟ್ರೀಕೃತ ಬ್ಯಾಂಕಿನ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಿರಿ. ಆದರೆ, ಡಬಲ್ ಎಂಜಿನ್ ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಾಗಲಿಲ್ಲ, ರೈತರ ಆದಾಯವೂ ದ್ವಿಗುಣವಾಗಲಿಲ್ಲ, ಆಗಿದ್ದು ಬೆಲೆ ಏರಿಕೆ ಮಾತ್ರ! ಇಂತಹ ಹೊಣೆಗೇಡಿತನ ಏಕೆ' ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ರೈತರ ಸಾಲ ಮರು ಹೊಂದಾಣಿಕೆ ನವೀಕರಣ ದಂಧೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ
— Ramesh Babu (@RameshBabuKPCC) August 30, 2022
ಸಾಲ ವಿತರಣೆ ವ್ಯವಹಾರವಾಗಿ ಮಾರ್ಪಟ್ಟಿದೆ
ಕಾನೂನು ಸಚಿವರೇ ಸಾಲ ನವೀಕರಣಕ್ಕೆ ಲಂಚ ನೀಡಿರುವುದಾಗಿ ಹೇಳುತ್ತಾರೆ
ಲಂಚದ ಸರ್ಕಾರ! ಮಂಚದ ಸರ್ಕಾರ! ಭ್ರಷ್ಟರ ಸರ್ಕಾರ! ರೈತ ವಿರೋಧಿ ಸರ್ಕಾರ!#nimmaattirauttaraidiya #meda #Congress #SocialMedia pic.twitter.com/nWYpc6bemV
ನಿಮ್ಮ ಪ್ರಣಾಳಿಕೆಯಲ್ಲಿ ಸಹಕಾರಿ - ರಾಷ್ಟ್ರೀಕೃತ ಬ್ಯಾಂಕಿನ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಿರಿ.
— Karnataka Congress (@INCKarnataka) August 30, 2022
ಆದರೆ,
ಡಬಲ್ ಎಂಜಿನ್ ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಾಗಲಿಲ್ಲ, ರೈತರ ಆದಾಯವೂ ದ್ವಿಗುಣವಾಗಲಿಲ್ಲ,
ಆಗಿದ್ದು ಬೆಲೆ ಏರಿಕೆ ಮಾತ್ರ!
ಇಂತಹ ಹೊಣೆಗೇಡಿತನ ಏಕೆ @BJP4Karnataka?#NimHatraIdyaUttara pic.twitter.com/1ib3XxVlet







