ಕುಂದಾಪುರ ಚರ್ಚಿನಲ್ಲಿ ತೇನೆ ಹಬ್ಬದ ನೊವೆನಾ ಆರಂಭ

ಕುಂದಾಪುರ, ಆ.30: ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿ ಯಾದ ೪೫೨ ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬದ ಪ್ರಯುಕ್ತ ತಯಾರಿಗಾಗಿ ಒಂಭತ್ತು ದಿನಗಳ ನೊವೆನಾ ಇಂದು ಆರಂಭ ವಾಯಿತು.
ಇಗರ್ಜಿಯ ಪ್ರಧಾನ ಧರ್ಮಗುರು ಅ.ವಂ.ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನ ಅರ್ಪಿಸಿ ನೊವೆನಾ ಪ್ರಾರ್ಥನೆ ನಡೆಸಿಕೊಡುವ ಮೂಲಕ ನೊವೆನಾಕ್ಕೆ ಚಾಲನೆ ನೀಡಿದರು. ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ಹಾ ಹಾಜರಿದ್ದು, ಮಕ್ಕಳು ಮತ್ತು ದೊಡ್ಡವರು ಭಕ್ತಿ ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.
Next Story





