ಮಂಗಳೂರು: ‘ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್’ ವಾರ್ಷಿಕ ಸಭೆ

ಮಂಗಳೂರು, ಆ.30: ‘ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್’ನ ವಾರ್ಷಿಕ ಮಹಾಸಭೆಯು ನಗರದ ಖಾಸಗಿ ಹೊಟೇಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷ ನೂರ್ ಮುಹಮ್ಮದ್ ಹುಸೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಲೆಕ್ಕಪತ್ರ ಮಂಡಿಸಲಾಯಿತು. ಬಳಿಕ ನೂತನ ಅಧ್ಯಕ್ಷ, ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎ.ಎಚ್. ಶಹನವಾಝ್, ಉಪಾಧ್ಯಕ್ಷರಾಗಿ ಖಲೀಲುರ‌್ರಹ್ಮಾನ್ ಎಂ.ಎಚ್., ಕಾರ್ಯದರ್ಶಿಯಾಗಿ ರಿಯಾಝ್ ಎ.ಎಚ್., ಜೊತೆ ಕಾರ್ಯದರ್ಶಿಯಾಗಿ ರಮೀಝ್ ಪಿ.ಸಿ., ಕೋಶಾಧಿಕಾರಿಯಾಗಿ ರಿಝ್ವಾನ್ ಅಹ್ಮದ್ ಸುಳ್ಯ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ಕೆ.ನಿಯಾಝ್, ನೂರ್ ಮುಹಮ್ಮದ್, ಶಮೀರುದ್ದೀನ್ ಪುತ್ತೂರು, ಫಝ್ಲು ಕೆ.ಪಿ., ರಹ್ಮತುಲ್ಲಾ, ಅಬ್ದುಲ್ ಸಮದ್ ಆಯ್ಕೆಯಾದರು.
‘ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಎಂಬಿಪಿಎಲ್) ಮತ್ತು ಬ್ಯಾರೀಸ್ ಬ್ಯಾಡ್ಮಿಂಟನ್ ಟೂರ್ನ್‌ಮೆಂಟ್’ಗಳನ್ನು ‘ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್’ ಆಯೋಜನೆ ಮಾಡುತ್ತಿದೆ.
Next Story





