ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿ ಮುಳುಗಡೆ; ಯುವಕ ನಾಪತ್ತೆ

ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರನ್ನು ನಾಗರಾಜ ರಾಮಕೃಷ್ಣ ಮೊಗೇರ ಎಂದು ತಿಳಿದು ಬಂದಿದೆ.
ರಕ್ಷಣೆಯಾದವರನ್ನು ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂದು ತಿಳಿದು ಬಂದಿದೆ. ಈ ಮೂವರು ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಮೂವರಲ್ಲಿ ಓರ್ವ ನಾಪತ್ತೆಯಾಗಿದ್ದು, ಇನ್ನಿಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಸದ್ಯ ರಕ್ಷಣೆ ಮಾಡಿರುವ ಮೀನುಗಾರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ಮೀನುಗಾರನನ್ನು ಹುಡುಕುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





