Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಉಚಿತ ಉಡುಗೊರೆ ಸಂಸ್ಕೃತಿ’...

‘ಉಚಿತ ಉಡುಗೊರೆ ಸಂಸ್ಕೃತಿ’ ಯಾಕಿದೆಯೆಂದರೆ...

ಅರುಣ್ ಸಿನ್ಹಾಅರುಣ್ ಸಿನ್ಹಾ31 Aug 2022 10:58 AM IST
share
‘ಉಚಿತ ಉಡುಗೊರೆ ಸಂಸ್ಕೃತಿ’ ಯಾಕಿದೆಯೆಂದರೆ...

 ‘ಉಚಿತ ಉಡುಗೊರೆಗಳ ಸಂಸ್ಕೃತಿ’ಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ‘ಧ್ವನಿ ಎತ್ತಿದಾಗ’, ಅವರು ಗುರಿ ಇಟ್ಟದ್ದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಆಮ್ ಆದ್ಮಿ ಪಾರ್ಟಿ (ಆಪ್) ಮುಂತಾದ ಪ್ರತಿಪಕ್ಷಗಳತ್ತ. ಇದು ತನ್ನ ವಿರುದ್ಧವೇ ತಿರುಗುಬಾಣವಾಗಬಹುದು ಎಂಬ ಕಲ್ಪನೆಯೇ ಅವರಲ್ಲಿರಲಿಲ್ಲ. ಅದೆಲ್ಲಾ ಇರಲಿ, ಅವರ ಸರಕಾರವೇ ಉಚಿತ ಉಡುಗೊರೆಗಳನ್ನು ವಿತರಿಸುತ್ತಿದೆ- ರೈತರಿಗೆ ನಗದು ಹಣ, ಮನೆ, ಶೌಚಾಲಯ, ಅನಿಲ ಸಿಲಿಂಡರ್‌ಗಳು, ಉಚಿತ ರೇಶನ್ ಇತ್ಯಾದಿ.

ಸುಪ್ರೀಂ ಕೋರ್ಟ್ ಇದನ್ನು ಮೋದಿಯವರಿಗೆ ಮತ್ತಷ್ಟು ಕಠಿಣವಾಗಿಸಿತು. ಎಲ್ಲಾ ಪಕ್ಷಗಳು ಉಚಿತ ಉಡುಗೊರೆಗಳನ್ನು ವಿತರಿಸಿವೆ ಹಾಗೂ ಈ ಪದ್ಧತಿ ಮುಂದುವರಿಯಬೇಕೆಂದು ಬಯಸಿವೆ ಎಂದು ನ್ಯಾಯಾಲಯ ಹೇಳಿತು. ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಅದನ್ನು ನಿಯಂತ್ರಿಸುವ ಕ್ರಮಗಳನ್ನು ಶಿಫಾರಸು ಮಾಡಲು ಸಮಿತಿಯೊಂದನ್ನು ನೇಮಿಸುವಂತೆ ನ್ಯಾಯಾಲಯ ಸೂಚಿಸಿತು. ಈ ವಿಷಯದಲ್ಲಿ ಮೂವರು ಸದಸ್ಯರ ಪೀಠವೊಂದನ್ನು ರಚಿಸಲು ತಾನು ಬಯಸಿರುವುದಾಗಿಯೂ ಅದು ಹೇಳಿತು.

ಆದರೆ, ಉಚಿತ ಉಡುಗೊರೆಗಳನ್ನು ಕೊಡುವ ಪದ್ಧತಿಯನ್ನು ಕೊನೆಗೊಳಿಸಲು ಯಾವುದೇ ಸಮಿತಿಗೆ ಸಾಧ್ಯವಾಗುತ್ತದೆಯೇ ಎನ್ನುವ ಬಗ್ಗೆ ಎಲ್ಲರಲ್ಲೂ ಸಂಶಯವಿದೆ. ಯಾಕೆಂದರೆ, ಎಲ್ಲಾ ಪಕ್ಷಗಳು ಹೇಳುವುದು ಒಂದೇ: ‘‘ಬೇರೆ ಪಕ್ಷಗಳು ಕೊಡುವುದು ಉಚಿತ ಉಡುಗೊರೆಗಳು, ಆದರೆ ನಾವು ಕೊಡುತ್ತಿರುವುದು ಉಚಿತ ಉಡುಗೊರೆಗಳಲ್ಲ’’. ಬಿಜೆಪಿ ಈಗಾಗಲೇ ವಾದಿಸುತ್ತಿದೆ- ಪ್ರತಿಪಕ್ಷ ಸರಕಾರಗಳ ಯೋಜನೆಗಳಲ್ಲಿ ಉತ್ಪಾದಕತೆಯ ವೌಲ್ಯಗಳಿಲ್ಲ, ಮೋದಿ ಸರಕಾರದ ಯೋಜನೆಗಳಲ್ಲಿ ಉತ್ಪಾದಕತೆಯ ವೌಲ್ಯಗಳಿವೆ. ಅದೇ ವೇಳೆ, ಡಿಎಂಕೆ ಹೇಳುತ್ತಿದೆ- ಒಂದು ಟೆಲಿವಿಶನ್ ಸೆಟ್‌ನಲ್ಲಿಯೂ ಉತ್ಪಾದಕನೆಯ ವೌಲ್ಯಗಳಿವೆ- ಎಂದು. ಯಾಕೆಂದರೆ, ಟೆಲಿವಿಶನ್ ಮನೆಯಲ್ಲಿ ಇದ್ದರೆ ಬಡ ಮಹಿಳೆಯರು ಟಿವಿ ನೋಡಲು ಬೇರೆಯವರ ಮನೆಗಳಿಗೆ ಹೋಗಬೇಕಾಗಿಲ್ಲ. ಇದರಿಂದ ಅವರ ಸ್ವಾಭಿಮಾನ ಹೆಚ್ಚುತ್ತದೆ ಹಾಗೂ ಅವರಿಗೆ ಜಾಗತಿಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದು ಬಡ ಮಹಿಳೆಯರ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಡಿಎಂಕೆ ವಾದಿಸುತ್ತದೆ.ಹಾಗಾಗಿ, ಯಾವುದು ‘ಉಚಿತ ಉಡುಗೊರೆ’ ಮತ್ತು ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸುವುದು ಸಮಿತಿಗೆ ಖಂಡಿತವಾಗಿಯೂ ಸುಲಭವಲ್ಲ.

ಉಚಿತ ಉಡುಗೊರೆಗಳನ್ನು ನಿರ್ಧರಿಸುವಾಗ ಸಮಿತಿಯು ತನ್ನ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ನಿರ್ಬಂಧಗಳನ್ನೂ ಎದುರಿಸಬೇಕಾಗುತ್ತದೆ. ಯಾಕೆಂದರೆ, ಕಾರ್ಯಕ್ರಮಗಳನ್ನು ರೂಪಿಸುವುದು ತಮ್ಮ ಸಾರ್ವಭೌಮಾಧಿಕಾರ ಎಂಬುದಾಗಿ ಚುನಾಯಿತ ಸರಕಾರಗಳು ಹೇಳುತ್ತವೆ. ಯೋಜನೆಯೊಂದರಲ್ಲಿ ಉತ್ಪಾದಕತೆಯ ವೌಲ್ಯಗಳಿವೆಯೇ ಇಲ್ಲವೇ ಎನ್ನುವುದನ್ನು ಹೇಳುವ ಅಧಿಕಾರ ಸಮಿತಿಗಿರುವುದಿಲ್ಲ. ಯೋಜನೆಯೊಂದನ್ನು ಜಾರಿಗೊಳಿಸುವ ಸಾಮರ್ಥ್ಯ ಸರಕಾರಕ್ಕಿದ್ದರೆ, ಆ ಯೋಜನೆ ಸರಿಯಾಗಿದೆ ಅಥವಾ ಜಾರಿಗೊಳಿಸುವ ಸಾಮರ್ಥ್ಯ ಇಲ್ಲದಿದ್ದರೆ ಅದು ಸರಿಯಾಗಿಲ್ಲ ಎಂದಷ್ಟೇ ಸಮಿತಿ ಹೇಳಬಹುದು. ಉಚಿತ ಉಡುಗೊರೆ ಬಗ್ಗೆ ಸಮಿತಿ ನೀಡುವ ವ್ಯಾಖ್ಯೆಯು ಸರಕಾರದ ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ, ಈ ವಿಷಯಕ್ಕೆ ಸಂಬಂಧಿಸಿ ಯಾವುದೇ ಸಮಿತಿಯು ಹೆಚ್ಚೆಂದರೆ, ‘ದುಂದುವೆಚ್ಚ’ವನ್ನು ನಿಯಂತ್ರಿಸುವುದಕ್ಕಾಗಿ ಆರ್ಥಿಕ ಶಿಸ್ತನ್ನು ಕಾಪಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಶಿಫಾರಸು ಮಾಡಬಹುದು, ಅಷ್ಟೆ.

ಇದು ದುಂದುವೆಚ್ಚವನ್ನು ಕಡಿತಗೊಳಿಸುವುದೇ? ಇದು ‘ಉಚಿತ ಉಡುಗೊರೆ ಸಂಸ್ಕೃತಿ’ಯನ್ನು ಕೊನೆಗೊಳಿಸುವುದೇ? ಇಲ್ಲ. ಯಾಕೆಂದರೆ, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷವು ಸಮಸ್ಯೆಯ ಬುಡಕ್ಕೇ ಕೊಡಲಿಯೇಟು ಹಾಕಲು ಬಯಸುವುದಿಲ್ಲ. ಉಚಿತ ಉಡುಗೊರೆ ಸಂಸ್ಕೃತಿಯಲ್ಲಿ ಇಬ್ಬರು ಭಾಗೀದಾರರಿದ್ದಾರೆ: ರಾಜಕೀಯ ಪಕ್ಷಗಳು ಮತ್ತು ನಿರ್ದೇಶಿತ ಗುಂಪುಗಳು. ಉದ್ದೇಶಿತ ಗುಂಪುಗಳ ಮತಗಳನ್ನು ಪಡೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಉಚಿತ ಉಡುಗೊರೆಗಳನ್ನು ವಿತರಿಸುತ್ತವೆ. ಜನರು ಉಚಿತ ಉಡುಗೊರೆಗಳೊಂದಿಗೆ ತಮ್ಮ ರಾಜಕೀಯ ಆಯ್ಕೆಯನ್ನು ಯಾಕೆ ವಿನಿಮಯ ಮಾಡಿಕೊಳ್ಳಲು ಇಷ್ಟಪಡುತ್ತಾರೆ? ಯಾಕೆಂದರೆ, ತಮ್ಮ ಕುಟುಂಬಗಳ ಅಗತ್ಯಗಳನ್ನು ಪೂರೈಸುವಷ್ಟು ಹಾಗೂ ಗೌರವ, ಘನತೆ ಮತ್ತು ಆರ್ಥಿಕ ಭದ್ರತೆಯಿಂದ ಬದುಕುವುದಕ್ಕಾಗಿ ಉಳಿತಾಯ ಮಾಡಲು ಬೇಕಾಗುವಷ್ಟು ಆದಾಯವನ್ನು ಅವರು ಹೊಂದಿರುವುದಿಲ್ಲ. ಮೇಲ್ವರ್ಗ ಮತ್ತು ಮಧ್ಯಮ ವರ್ಗಗಳು ಉಚಿತ ಉಡುಗೊರೆಗಳನ್ನು ಬಯಸುತ್ತವೆಯೇ? ಇಲ್ಲ. ಬಹುಷಃ ಉಚಿತ ಉಡುಗೊರೆ ನಿಮಗೆ ಬೇಕೇ ಎಂದು ಕೇಳಿದರೂ ಅವರು ಅವಮಾನಪಟ್ಟುಕೊಳ್ಳಬಹುದು.

ಬಡತನ ಇರುವುದರಿಂದ ಉಚಿತ ಉಡುಗೊರೆಗಳೂ ಇವೆ. ಬಡತನ ಯಾಕೆ ಇದೆ ಎಂದರೆ, ಸರಕಾರದ ಆರ್ಥಿಕ ನೀತಿಗಳು ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗಿವೆ. ಆದರೆ, ಅಸಂಖ್ಯ ಜನ ಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಯಾವುದೇ ದೇಣಿಗೆ ನೀಡಿಲ್ಲ. ದೇಶದ 75 ಶೇಕಡಕ್ಕೂ ಅಧಿಕ ರೈತರು ಒಂದು ಹೆಕ್ಟೇರ್ (2.47 ಎಕರೆ)ಗಿಂತಲೂ ಕಡಿಮೆ ಜಮೀನು ಹೊಂದಿದ್ದಾರೆ. ಸಣ್ಣ ಸಣ್ಣ ಹೊಲಗಳಲ್ಲಿ ಬೆಳೆಯುವ ಬೆಳೆಗಳಿಂದ ಬರುವ ಆದಾಯ ಜೀವನಕ್ಕೆ ಸಾಕಾಗದೆ ಇರುವುದರಿಂದ ಅವರು ಕಾರ್ಮಿಕರಾಗಿಯೂ ಕೆಲಸ ಮಾಡುತ್ತಾರೆ. ಜನಸಂಖ್ಯೆಯ ಬಹುದೊಡ್ಡ ಭಾಗ ಇಂಥವರೇ ಆಗಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 11 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಈ ಪೈಕಿ 8.25 ಕೋಟಿ ರೈತರ (ಶೇ. 75) ಕುಟುಂಬಗಳು ಜೀವನ ಸಾಗಿಸುವುದಕ್ಕಾಗಿ ಕೃಷಿಯಿಂದ ಬರುವ ಆದಾಯದ ಜೊತೆಗೆ ದಿನಗೂಲಿ ಕಾರ್ಮಿಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರು ಇದ್ದಾರೆ ಎಂಬುದಾಗಿ ಲೆಕ್ಕ ಹಾಕಿದರೆ 33 ಕೋಟಿ ಭಾರತೀಯರು ಈ ವರ್ಗದಲ್ಲಿ ಬರುತ್ತಾರೆ.

ಈ 33 ಕೋಟಿ ಭಾರತೀಯರು ಅತ್ಯಂತ ಅತಂತ್ರ ಬದುಕನ್ನು ಬದುಕುತ್ತಿದ್ದಾರೆ. ಯಾವುದೇ ಕಾರಣಕ್ಕಾಗಿ ಒಂದು ಋತುವಿನಲ್ಲಿ ಬೆಳೆ ಕೈಕೊಟ್ಟರೆ ಅವರು ಬಡತನಕ್ಕೆ ಜಾರುತ್ತಾರೆ. ಕುಟುಂಬದ ಓರ್ವ ದುಡಿಯುವ ಪುರುಷ ದೀರ್ಘಾವಧಿಗೆ ಕಾಯಿಲೆ ಬಿದ್ದರೆ ಅಥವಾ ತಿಂಗಳುಗಟ್ಟಲೆ ಸಂಬಳ ಸಿಗದೆ ಇದ್ದರೆ ಕುಟುಂಬವು ತುಂಬಾ ಸಂಕಷ್ಟದ ಪರಿಸ್ಥಿತಿಗೆ ಜಾರುತ್ತದೆ. ಆಹಾರ ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ಅವರ ಕುಟುಂಬ ಸದಸ್ಯರೂ ಕಾಯಿಲೆ ಬೀಳಬಹುದು. ಹಾಗೆ ಆದರೆ, ಅದು ಕುಟುಂಬಕ್ಕೆ ಎದುರಾಗುವ ದೊಡ್ಡ ಗಂಡಾಂತರವಾಗುತ್ತದೆ. ಹೀಗಿರುವಾಗ, ಉಚಿತ ಉಡುಗೊರೆಗಳನ್ನು ನಿರೀಕ್ಷಿಸುತ್ತಿರುವುದಕ್ಕಾಗಿ ಅವರನ್ನು ತಪ್ಪಿತಸ್ಥರು ಎಂದು ಹೇಳಬಹುದೇ?

ಕೃಷಿ ಕ್ಷೇತ್ರದಲ್ಲಿರುವ ಹೆಚ್ಚುವರಿ ಕಾರ್ಮಿಕರು ಕೃಷಿಯೇತರ ಉದ್ಯೋಗದತ್ತ ಹೋದರೆ, ಅದು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ ಹಾಗೂ ಕಾರ್ಮಿಕರಿಗೆ ಉತ್ತಮ ವೇತನ ಮತ್ತು ಉತ್ತಮ ಜೀವನ ಮಟ್ಟವನ್ನು ಒದಗಿಸುತ್ತದೆ ಎನ್ನುವುದು ಅರ್ಥಶಾಸ್ತ್ರಜ್ಞರ ಸಾಂಪ್ರದಾಯಿಕ ಜ್ಞಾನವಾಗಿದೆ. ಆರ್ಥಿಕ ಬೆಳವಣಿಗೆಯಾಗಿದ್ದರೂ, ಕಾರ್ಮಿಕರ ವೇತನ ಮತ್ತು ಜೀವನ ಮಟ್ಟದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ನಗರಗಳಲ್ಲಿರುವ ಹೆಚ್ಚಿನ ಕೆಲಸಗಾರರು ಅನಿಯಮಿತ ಹಾಗೂ ಕಡಿಮೆ ವೇತನದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ವೇತನ ಸಹಿತ ರಜೆ, ವೈದ್ಯಕೀಯ ಸೇವೆ, ಅಪಘಾತ ವಿಮೆ, ಭವಿಷ್ಯನಿಧಿ ಅಥವಾ ಪಿಂಚಣಿ ಯಾವುದೂ ಇಲ್ಲ. ಹೀಗಿರುವಾಗ, ಅವರು ಉಚಿತ ಉಡುಗೊರೆಗಳಿಗಾಗಿ ತಮ್ಮ ಮತಗಳನ್ನು ವಿನಿಮಯ ಮಾಡಿಕೊಂಡಿರುವುದನ್ನು ತಪ್ಪೆಂದು ಹೇಳಲು ಸಾಧ್ಯವೇ?

ದೇಶದ ನಿರುದ್ಯೋಗ ದರವು ಕಳೆದ ಎಂಟು ವರ್ಷಗಳಲ್ಲಿ ಶೇ. 7-8ರ ಮಟ್ಟದಲ್ಲೇ ಇದೆ. ನೋಟುಗಳ ಅಮಾನ್ಯೀಕರಣದಿಂದಾಗಿ, ಮುಖ್ಯವಾಗಿ ಅನೌಪಚಾರಿಕ ವಲಯದಲ್ಲಿ ಎಷ್ಟು ಲಕ್ಷ ಉದ್ಯೋಗಗಳು ನಾಶವಾಗಿವೆ ಎನ್ನುವುದನ್ನು ಪ್ರಧಾನಿಯವರು ದಯವಿಟ್ಟು ಹೇಳುವರೇ? ಕೇವಲ ನಾಲ್ಕು ಗಂಟೆಗಳ ಮುನ್ನೆಚ್ಚರಿಕೆ ನೀಡಿ ದೇಶಾದ್ಯಂತ ದಿಢೀರನೆ ಲಾಕ್‌ಡೌನ್ ಹೇರಿದ ಕಾರಣದಿಂದ ಇನ್ನೆಷ್ಟು ಲಕ್ಷ ಉದ್ಯೋಗಗಳು ಮತ್ತು ಮಜೂರಿಗಳು ನಾಶವಾಗಿವೆ ಎನ್ನುವುದನ್ನು ಅವರು ದಯವಿಟ್ಟು ಹೇಳುವರೇ? 2022 ಜೂನ್‌ನಲ್ಲಿ, 20-24 ವರ್ಷ ವಯೋ ಗುಂಪಿನ ದೇಶದ ಯುವಕರ ಪೈಕಿ ಶೇ. 44ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದರು. ಅಂದರೆ 15 ಕೋಟಿ ಯುವಕರು. ಕೊರೋನ ವೈರಸ್ ಅವಧಿಯಲ್ಲಿ ಉತ್ಪಾದನಾ ವಲಯವು ಕೆಲಸದಿಂದ ತೆಗೆದು ಹಾಕಿದ ಸುಮಾರು ಒಂದು ಕೋಟಿ ಕೆಲಸಗಾರರನ್ನು ಇನ್ನು ಕೆಲಸಕ್ಕೆ ವಾಪಸ್ ಪಡೆದುಕೊಳ್ಳಲಾಗಿಲ್ಲ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ, ಕೇಂದ್ರ ಸರಕಾರದ ಉದ್ಯೋಗಗಳಿಗಾಗಿ 22 ಕೋಟಿ ಮಂದಿ ಅರ್ಜಿ ಹಾಕಿದ್ದಾರೆ. ಆದರೆ, ಈ ಪೈಕಿ ಕೆಲಸ ಸಿಕ್ಕಿದ್ದು 7.22 ಲಕ್ಷ ಮಂದಿಗೆ ಮಾತ್ರ. ಕೋಟ್ಯಂತರ ನಿರುದ್ಯೋಗಿ ಭಾರತೀಯರು ಹತಾಶರಾಗಿ ಉಚಿತ ಉಡುಗೊರೆಗಳನ್ನು ಎದುರು ನೋಡುತ್ತಿದ್ದರೆ ಹಾಗೂ ಅದಕ್ಕಾಗಿ ತಮ್ಮ ಮತಗಳನ್ನು ಮಾರಾಟ ಮಾಡಲು ಸಿದ್ಧರಿದ್ದರೆ, ಅದನ್ನು ಅವರ ತಪ್ಪೆಂದು ಹೇಳಬಹುದೇ?

‘ಉಚಿತ ಉಡುಗೊರೆ’ ಸಂಸ್ಕೃತಿಯನ್ನು ಪೋಷಿಸುತ್ತಿರುವುದಕ್ಕೆ ಪ್ರಧಾನಿ, ಬಿಜೆಪಿ ಮತ್ತು ಇತರ ಎಲ್ಲಾ ರಾಜಕೀಯ ಪಕ್ಷಗಳನ್ನು ಹೊಣೆ ಮಾಡಬೇಕು. ಆರ್ಥಿಕ ಬೆಳವಣಿಗೆಯೊಂದಿಗೆ ಗುಣಮಟ್ಟದ ಉದ್ಯೋಗ ಬೆಳವಣಿಗೆಯನ್ನೂ ಖಾತರಿಪಡಿಸುವ ಆರ್ಥಿಕ ನೀತಿಯೊಂದನ್ನು ದೇಶಕ್ಕೆ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಇದು ಅವುಗಳ ಸಾಮೂಹಿಕ ವೈಫಲ್ಯ. ದೇಶದ ಬೃಹತ್ ಪ್ರಮಾಣದ ಜನ ಸಾಮಾನ್ಯರಿಗೆ ಗುಣಮಟ್ಟದ ಉದ್ಯೋಗವನ್ನು ನೀಡಲು ಸಾಧ್ಯವಾಗದ ಕಾರಣಕ್ಕಾಗಿ ಅವರು ಉಚಿತ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಬಹುಷಃ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಅಥವಾ ತಪ್ಪನ್ನು ಸರಿಪಡಿಸುವುದಕ್ಕಾಗಿ, ಬಹುಷಃ ಬಡವರು ಬಂಡಾಯ ಏಳುವುದನ್ನು ತಡೆಯುವ ಏಕೈಕ ಉದ್ದೇಶಕ್ಕಾಗಿ.

‘ಉಚಿತ ಉಡುಗೊರೆ ಸಂಸ್ಕೃತಿ’ಯನ್ನು ಕೊನೆಗೊಳಿಸುವ ಹೊಣೆಯೂ ಪ್ರಧಾನಿ ಮೋದಿ, ಬಿಜೆಪಿ ಮತ್ತು ಇತರ ಎಲ್ಲಾ ರಾಜಕೀಯ ಪಕ್ಷಗಳ ಮೇಲಿದೆ. ಅವರು ಜನಸಂಖ್ಯೆಯ ಬೃಹತ್ ಭಾಗಕ್ಕೆ ಉತ್ತಮ ವರಮಾನದ ಉದ್ಯೋಗಗಳನ್ನು ನೀಡುವುದಕ್ಕಾಗಿ ದೇಶದ ಆರ್ಥಿಕ ನೀತಿಯನ್ನು ಮರುಬರೆಯಬೇಕು. ಅದು ಮುಂದಿನ ಆರ್ಥಿಕ ಸುಧಾರಣೆಗಳಾಗಬೇಕು. ಅಂಥ ಸುಧಾರಣೆಗಳ ಬಗ್ಗೆ ದೇಶವು ಈಗ ಚಿಂತಿಸಬೇಕು, ಅವುಗಳನ್ನು ವಿನ್ಯಾಸಗೊಳಿಸಬೇಕು ಮತ್ತು ಜಾರಿಗೊಳಿಸಬೇಕು.

ಜನರು ಉತ್ತಮ ಆದಾಯ ಮತ್ತು ಉಳಿತಾಯಗಳನ್ನು ಹೊಂದಿದ್ದರೆ, ಅವರು ಉಚಿತ ಉಡುಗೊರೆಗಳನ್ನು ಬಯಸುವುದನ್ನು ನಿಲ್ಲಿಸುತ್ತಾರೆ. ಅಲ್ಲಿಗೆ ‘ಉಚಿತ ಉಡುಗೊರೆಗಳಿಗಾಗಿ-ಮತ’ ಎನ್ನುವ ಮಾರುಕಟ್ಟೆಯೂ ಮುಚ್ಚುತ್ತದೆ. ಆಗ ಪ್ರಜಾಪ್ರಭುತ್ವವು ಮುಕ್ತ ಮತ್ತು ಬಲಿಷ್ಠವಾಗುತ್ತದೆ.

                                                                                                                               ಕೃಪೆ: freepressjournal.in

share
ಅರುಣ್ ಸಿನ್ಹಾ
ಅರುಣ್ ಸಿನ್ಹಾ
Next Story
X