ಮತಾಂತರ ಆರೋಪದ ಬಳಿಕ ಚರ್ಚ್ ಧ್ವಂಸಗೊಳಿಸಿದ ಅಪರಿಚಿತ ದುಷ್ಕರ್ಮಿಗಳು

Photo: Twitter Screengrab/Freepressjournal
ಹೊಸದಿಲ್ಲಿ: ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಥಕರ್ಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಚರ್ಚ್(Church) ಅನ್ನು ಧ್ವಂಸಗೊಳಿಸಿದೆ ಎಂದು Theindianexpress.com ವರದಿ ಮಾಡಿದೆ.
ಜನಸಮೂಹವು ಭದ್ರತಾ ಸಿಬ್ಬಂದಿಯನ್ನು ಗನ್ಪಾಯಿಂಟ್ನಲ್ಲಿ ನಿಲ್ಲಿಸಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದೆ ಎಂದು ಪಂಜಾಬ್ ಪೊಲೀಸರು(Punjab Police) ತಿಳಿಸಿದ್ದಾರೆ. ಎನ್ಡಿಟಿವಿ ಪ್ರಕಾರ ಅವರು ಚರ್ಚ್ನ ಪಾದ್ರಿಯ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, "ಯೇಸುವಿನ(Jesus) ಪ್ರತಿಮೆಯ ತಲೆಯನ್ನು ತೆಗೆದುಕೊಂಡು ಹೋಗಲಾಗಿದೆ" ಎಂದು ಪಂಜಾಬ್ ಪೊಲೀಸ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ. “ನಾವು ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು' ಎಂದು ಹೇಳಿದ್ದಾರೆ.
ಕ್ರಿಶ್ಚಿಯನ್ ಮಿಷನರಿಗಳ(Christian Missionary) ಮತಾಂತರದ ವಿರುದ್ಧ ಸಿಖ್ಖರ ಸಂಘಟನೆ ಅಕಾಲ್ ತಖ್ತ್ ಹೇಳಿಕೆ ನೀಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಕಾಲ್ ತಖ್ತ್ನ(Akal Takht) ನಾಯಕ ಗಿಯಾನಿ ಹರ್ಪ್ರೀತ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ರಾಜ್ಯದಲ್ಲಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.
"ಕ್ರೈಸ್ತ ಮಿಷನರಿಗಳು ಎಂದು ಕರೆಯಲ್ಪಡುವವರು ಮೋಸದ ಆಚರಣೆಗಳ ಮೂಲಕ ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ" ಎಂದು ಸಿಂಗ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಪಂಜಾಬ್ನ ಸಿಖ್ಖರು ಮತ್ತು ಹಿಂದೂಗಳನ್ನು ದಾರಿತಪ್ಪಿಸಿ ಮತಾಂತರಗೊಳಿಸಲಾಗುತ್ತಿದೆ. ಇದು ಸರ್ಕಾರದ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದೂ ಅವರು ಆರೋಪಿಸಿದ್ದರು.
On camera: #Church vandalised in #Punjab, pastor's #vehicle burnt; after forced conversion charge @TarnTaranPolice#PunjabNews #Viral #ViralVideo #Jesus #TarnTaran #Demolition #CCTV #CCTVFootage pic.twitter.com/RsQXBS1rD5
— Free Press Journal (@fpjindia) August 31, 2022







