ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಮೈದಾಳಿಗೆ ಹರಕೆಯ ಸೀಮಂತ ಶಾಸ್ತ್ರ
ಪ್ರತಿವರ್ಷ ಚೌತಿಯಂದು ನಡೆಯುತ್ತೆ ಹರಕೆ ತೀರಿಸುವ ಬಯಕೆ ಶಾಸ್ತ್ರ

ಕುಂದಾಪುರ: ಉಡುಪಿ ಜಿಲ್ಲೆಯ ಗೋಳಿಯಂಗಡಿ ಹಿಲಿಯಾಣದ ಕಾರಣಿಕ ಗರೋಡಿಯಾದ ಬ್ರಹ್ಮ ಬೈದರ್ಕಳ ಹಿಲಿಯಾಣ ಗರೋಡಿಯಲ್ಲಿ ವರ್ಷಂಪ್ರತಿಯಂತೆ ಗಣೇಶ ಚತುರ್ಥಿ ದಿನದಂದು ಗರೋಡಿಯ ಮೈದಾಳಿ ದೇವರಿಗೆ ಬಯಕೆ ಅಥವಾ ಸೀಮಂತ ಶಾಸ್ತ್ರ ನಡೆಸುದು ವಾಡಿಕೆ.
ಈ ಬಯಕೆ ಶಾಸ್ತ್ರವನ್ನು ಗರೋಡಿಯನ್ನ ನಂಬಿದ ಭಕ್ತರು ಹರಕೆ ರೂಪದಲ್ಲಿ ಈ ಸೇವೆಯನ್ನು ನೀಡುತ್ತಾರೆ. ಸಂತಾನ ಭಾಗ್ಯ, ಆರೋಗ್ಯ ಭಾಗ್ಯ, ಉದ್ಯೋಗ ಭಾಗ್ಯ ಹೀಗೆ ಹತ್ತಾರು ಹರಕೆಗಳನ್ನ ಮೈದಾಳಿ ದೇವರಲ್ಲಿ ಕಟ್ಟಿಕೊಳ್ಳುತ್ತಾರೆ. ಭಕ್ತಾದಿಗಳ ಈ ಹರಕೆ ನೆರೆವೇರುತ್ತಿದಂತೆ ಗಣೇಶ ಚತುರ್ಥಿಯಂದು ಭಕ್ತಾದಿಗಳು ಮೈದಾಳಿ ದೇವರಿಗೆ ಭಯಕೆ ಶಾಸ್ತ್ರದ ಹರಕೆಯನ್ನ ನೇರವೇರಿಸುತ್ತಾರೆ.
ಗರೋಡಿಯ ಅರ್ಚಕರು ಮೈದಾಳಿ ದೇವರಿಗೆ ಬಯಕೆ ಶಾಸ್ತ್ರಕ್ಕೆ ಬಡಿಸುವಂತ ಖಾದ್ಯಗಳನ್ನ ಬಡಿಸಿ ಮಂಗಳಾರತಿ ಮಾಡುತ್ತಾರೆ.ಇದು ಇಲ್ಲಿನ ಕಟ್ಟುಕಟ್ಟಲೆ ಎಂಬಂತೆ ನಡೆಯುತ್ತಲೆ ಬಂದಿದೆ.
ಈ ಬಾರಿ ಮೈದಾಳಿ ಬಯಕೆ ಸೇವೆಯನ್ನ ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತು ಸಂತಾನ ಭಾಗ್ಯ ಪಡೆದ ಚಂದ್ರಾವತಿ ಮಂಜುನಾಥ ಹಾಗೂ ಮಗನಿಗೆ ಉದ್ಯೋಗ ಸಿಕ್ಕರೆ ಬಯಕೆ ಸೇವೆ ನೀಡುತ್ತೆನೆಂದು ಹರಕೆ ಹೊತ್ತು ಉದ್ಯೋಗ ಪಡೆದ ವಿವೇಕ್ ಶೆಟ್ಟಿ ತಾರಿಕಟ್ಟೆಯ ಹೆತ್ತವರಾದ ಹೇಮಾವತಿ ಕರುಣಾಕರ ಶೆಟ್ಟಿ ಈ ಬಾರಿಯ ಬಯಕೆ ಸೇವೆಯನ್ನ ನೀಡಿದರು.
ಬಯಕೆ ಹರಕೆ ಸೇವೆ ಬ್ರಹ್ಮ ಬೈದರ್ಕಳ ಗರೋಡಿಯ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿಯವರ ಮುಂದಾಳತ್ವದಲ್ಲಿ, ಅರ್ಚಕ ಕರುಣಾಕರ ಪೂಜಾರಿ ಮತ್ತು ಸಿಬ್ಬಂದಿಗಳು ಬಯಕೆ ಶಾಸ್ತ್ರವನ್ನು ನೆರವೇರಿಸಿದರು.
ದೈವಸ್ಥಾನದ ದೇವರ ಕೆಲಸ ಕಾರ್ಯ ಮಾಡಿಕೊಂಡಿದ್ದ ಕೇಶವ ಅವರು ಅಪಘಾಕ್ಕಿಡಾಗಿದ್ದು ಇದೇ ಸಂದರ್ಭ ಗರೋಡಿ ವತಿಯಿಂದ ಐದು ಸಾವಿರವನ್ನು ಗರೋಡಿ ಪರವಾಗಿ ಅಧ್ಯಕ್ಷ ಕರುಣಾಕರ ಶೆಟ್ಟಿ ನೀಡಿದರು.
ಈ ಸಂದರ್ಭ ಗರೋಡಿಯ ಕೋಶಾಧಿಕಾರಿ ಸಂತೋಷ ಕುಮಾರ್ ಶೆಟ್ಟಿ ,ಸಾಗರ್ ಸೊಸೈಟಿಯ ಹರೀಶ್, ವಾಸುದೇವ ಗುಲಾಬಿ, ಚಂದ್ರ ಶೇಖರ್ ಶೆಟ್ಟಿ ತಾರಿಕಟ್ಟೆ, ಉದಯ್ ಶೆಟ್ಟಿ ಹಿಲಿಯಾಣ ಹಾಗೂ ಊರ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತಿರಿದ್ದರು.






.jpeg)
.jpeg)


