ಶಿವರಾತ್ರಿ ರಾಜೇಂದ್ರ ಸ್ವಾಮಿಯ ಜಯಂತಿ ಮಹೋತ್ಸವ ಆಚರಣೆ

ಮಂಗಳೂರು: ದ.ಕ.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ದ.ಕ.ಜಿಲ್ಲಾ ಕದಳಿ ವೇದಿಕೆತ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರೂವಾರಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಯ 107ನೆಯ ಜಯಂತಿ ಮಹೋತ್ಸವವನ್ನು ಆಚರಿಸಲಾಯಿತು.
ಹನ್ನೆರಡನೆಯ ಶತಮಾತದಲ್ಲಿದ್ದ ಶರಣರ ಅನುಭವ ಮಂಟಪವು ಜಾತಿ, ಮತ,ಭೇದಗಳನ್ನು ತೊಡೆದು ಸಮಾನತೆಯ ಬೀಜವನ್ನು ಬಿತ್ತಿದವರು,ಕೋಮು ಸಂಘರ್ಷ ಧರ್ಮ ಸಂಘರ್ಷಗಳು ನಾಡಿನ ಸಂಸ್ಕೃತಿಯನ್ನೇ ಬುಡಮೇಲು ಮಾಡುತ್ತಿವೆ,ಸಮಾಜದ ಉನ್ನತಿಗೆ ಪೂರಕವಾದ ಬಸವ ತತ್ವಗಳನ್ನು ಪ್ರಚಾರಗೊಳಿಸಿ ಸಮಾನತೆಯ ಭಾವನೆ ಸರ್ವರಲಿ ಬೆಳೆಯಬೇಕೆಂಬುದು ಸಂಘದ ಆಶಯ ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುರೇಖಾ ಯಾಳವಾರ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ನಿರ್ವಾಹಕಿ ಇಸ್ಮತ್ ಜಹಾನ್ ಕಾರ್ಯಕ್ರಮ ಉದ್ಘಾಟಿಸಿದರು.
ಸುಜೀರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಉಪನ್ಯಾಸ ನೀಡಿದರು.
Next Story





