ಉಡುಪಿ: ಕೋವಿಡ್‌ಗೆ ಇನ್ನೊಂದು ಬಲಿ

ಉಡುಪಿ: ಕೋವಿಡ್ ಸಾಂಕ್ರಾಮಿಕ ಜಿಲ್ಲೆಯಲ್ಲಿ ಸತತ ಎರಡನೇ ಬಲಿ ಪಡೆದಿದೆ. ನಿನ್ನೆ 98ರ ವೃದ್ಧರೊಬ್ಬರು ಕೋವಿಡ್‌ಗೆ ಬಲಿಯಾದರೆ ಇಂದು ಉಡುಪಿಯ 90ವರ್ಷ ಪ್ರಾಯದ ಹಿರಿಯ ನಾಗರೀಕರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಟಿಬಿ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರನ್ನು ಗಂಭೀರ ಕೋವಿಡ್ ರೋಗ ಲಕ್ಷಣಗಳೊಂದಿಗೆ ಕಳೆದ ಆ.15ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇವರು ಆ. 28ರಂದು ಮೃತಪಟ್ಟರು.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಅಧಿಕೃತವಾಗಿ ಬಲಿಯಾದವರ ಸಂಖ್ಯೆ 549ಕ್ಕೇರಿದೆ. ಈ ವರ್ಷ ಕೋವಿಡ್‌ನಿಂದ ಮೃತಪಟ್ಟವರು 56 ಮಂದಿ.
ಬುಧವಾರ ಜಿಲ್ಲೆಯಲ್ಲಿ 11ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದು, 16 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 51 ಮಂದಿ ಈಗಲೂ ಚಿಕಿತ್ಸೆಯಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





