ಬಿಹಾರ: ಪ್ರತಿಭಟನೆಯ ನಂತರ ಅಪಹರಣ ಪ್ರಕರಣದ ಆರೋಪಿ, ಸಚಿವ ಕಾರ್ತಿಕ್ ಕುಮಾರ್ ರಾಜೀನಾಮೆ

ಪಾಟ್ನಾ: 2014ರ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ನಿತೀಶ್ ಕುಮಾರ್ ನೇತೃತ್ವದ ಸರಕಾರದ ಸಚಿವರೊಬ್ಬರು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಬುಧವಾರ ರಾತ್ರಿ ರಾಜೀನಾಮೆ ನೀಡಿದ್ದಾರೆಂದು NDTV ವರದಿ ಮಾಡಿದೆ.
ಹಿಂದಿನ ದಿನ ನಿತೀಶ್ ಸರಕಾರದ ಮೈತ್ರಿ ಪಾಲುದಾರ ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ನಾಯಕ ಬಿಹಾರದ ಕಾನೂನು ಸಚಿವ ಕಾರ್ತಿಕ್ ಕುಮಾರ್ (Bihar Law Minister Kartik Kumar, a leader from the alliance partner Rashtriya Janata Dal)ಅವರನ್ನು ಅಪಹರಣ ಆರೋಪ ಕೇಳಿ ಬಂದ ಮೇಲೆ ಕಬ್ಬು ಇಲಾಖೆ ಖಾತೆ ನೀಡಿ ಹಿಂಭಡ್ತಿ ನೀಡಲಾಗಿತ್ತು.
ಕಾರ್ತಿಕ್ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಹೊಸ ಸರಕಾರವನ್ನು ರಚಿಸಿದ ನಂತರ ಕಾರ್ತಿಕ್ ಕುಮಾರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಯಿತು.
ರಾಜಕೀಯವಾಗಿ ಪ್ರಬಲವಾದ ಮೇಲ್ಜಾತಿ, ಬಿಜೆಪಿಯ ಬಗ್ಗೆ ಸಹಾನುಭೂತಿ ಹೊಂದಿರುವ ಭೂಮಿಹಾರ್‌ಗಳ ಕಡೆಗೆ ಪ್ರಭಾವ ಬೀರುವ ಭಾಗವಾಗಿ ಕುಮಾರ್ ಅವರನ್ನ ಸಚಿವರ ಸ್ಥಾನಕ್ಕೆ ಆರ್‌ಜೆಡಿ ಆಯ್ಕೆ ಮಾಡಿತ್ತು ಎಂದು ನಂಬಲಾಗಿದೆ.
ಕಾರ್ತಿಕ್ ಕುಮಾರ್ ಅವರನ್ನು ಸಚಿವರನ್ನಾಗಿ ನೇಮಿಸಿದಾಗ ಬಿಜೆಪಿ ನಿತೀಶ್ ಕುಮಾರ್ ಸರಕಾರವನ್ನು ತೀವ್ರವಾಗಿ ಟೀಕಿಸಿತ್ತು.







