34 ನೆಕ್ಕಿಲಾಡಿಯಲ್ಲಿ ಭಾರೀ ಗಾಳಿಮಳೆ: ತೆಂಗಿನಮರ ಬಿದ್ದು ಮನೆಗೆ ಹಾನಿ

ಉಪ್ಪಿನಂಗಡಿ, ಸೆ.1: ಭಾರೀ ಗಾಳಿಮಳೆಗೆ ತೆಂಗಿನಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೀಡಾದ ಘಟನೆ 34 ನೆಕ್ಕಿಲಾಡಿಯ ದರ್ಬೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ನಿನ್ನೆ ಸಂಜೆ ಈ ಭಾಗದಲ್ಲಿ ಮಳೆಯೊಂದಿಗೆ ಜೋರು ಗಾಳಿ ಬೀಸಿದ್ದು, ಇಲ್ಲಿನ ದರ್ಬೆ ನಿವಾಸಿ ಸುರೇಶ್ ನಾಯ್ಕ ಎಂಬವರ ಮನೆಯ ಹಿತ್ತಲಿನಲ್ಲಿದ್ದ ತೆಂಗಿನಮರ ಬುಡ ಸಮೇತ ಉರುಳಿ ಮನೆಯ ಮೇಲೆಯೇ ಮಗುಚಿ ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿ ಹಾಗೂ ಮನೆಯ ಎದುರು ಹಾಕಲಾಗಿದ್ದ ಸಿಮೆಂಟ್ ಶೀಟ್‌ಗೆ ಹಾನಿಯಾಗಿದ್ದು, ಸುಮಾರು 50 ಸಾವಿರಕ್ಕಿಂತಲೂ ಅಧಿಕ ನಷ್ಟ ಸಂಭವಿಸಿದೆ. ಘಟನೆಯ ಸಂದರ್ಭ ಮನೆ ಮಂದಿ ಮನೆಯೊಳಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಚಿಂಚೋಳಿ | ತಾಲೂಕಿನ ಹಲವೆಡೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ
Next Story