72 ಗಂಟೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿಗಳ ಹತ್ಯೆ: ಮಧ್ಯಪ್ರದೇಶದಲ್ಲಿ ಭೀತಿ ಸೃಷ್ಟಿ

ಭೋಪಾಲ್: ಮಧ್ಯಪ್ರದೇಶ ಸಾಗರ್ ಜಿಲ್ಲೆಯಲ್ಲಿ ಕಳೆದ 72 ಗಂಟೆಗಳಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದ್ದು, (3 security guards murdered in Madhya Pradesh)ಈ ಘಟನೆಯು ನಗರದಲ್ಲಿ ಭೀತಿ ಸೃಷ್ಟಿಸಿದೆ. ಒಂದೇ ವ್ಯಕ್ತಿ ಇಬ್ಬರನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯ ಮಾದರಿಯು ಸರಣಿ ಹಂತಕ ಭಾಗಿಯಾಗಿರುವ ಶಂಕೆಗೆ ಕಾರಣವಾಯಿತು, ಆದರೆ ಸಾಗರ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಇದು ತನಿಖೆಯ ವಿಷಯವಾಗಿದೆ ಹಾಗೂ ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ಶಂಕಿತ ಹಂತಕನ ರೇಖಾಚಿತ್ರವನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 28-29 ರ ಮಧ್ಯರಾತ್ರಿ 50 ರ ಹರೆಯದ ಹಾಗೂ ಕಾರ್ಖಾನೆಯೊಂದರಲ್ಲಿ ನಿಯೋಜಿಸಲಾದ ಸೆಕ್ಯುರಿಟಿ ಗಾರ್ಡ್ ಕಲ್ಯಾಣ್ ಲೋಧಿ ಕೊಲ್ಲಲ್ಪಟ್ಟರು. ಲೋಧಿ ತಲೆಯನ್ನು ಹಂತಕ ಸುತ್ತಿಗೆಯಿಂದ ಒಡೆದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಮತ್ತೊಬ್ಬ ಭದ್ರತಾ ಸಿಬ್ಬಂದಿಯ ತಲೆಯನ್ನು ಕಲ್ಲಿನಿಂದ ಚಚ್ಚಿ ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಗಸ್ಟ್ 30-31 ರ ಮಧ್ಯರಾತ್ರಿ ಮೋತಿ ನಗರ ಪ್ರದೇಶದಲ್ಲಿ ನಡೆದ ಮೂರನೇ ಘಟನೆಯಲ್ಲಿ ಮನೆಯನ್ನು ಕಾವಲು ಕಾಯುತ್ತಿದ್ದ ಕಾವಲುಗಾರ ಮಂಗಲ್ ಅಹಿರ್ವಾರ್ ಅವರನ್ನು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲ್ಲಲಾಯಿತು ಎಂದು ಅವರು ಹೇಳಿದರು.
"ಲೋಧಿ ಮತ್ತು ದುಬೆ ಅವರನ್ನು ಒಂದೇ ವ್ಯಕ್ತಿ ಕೊಂದಿದ್ದಾರೆಂದು ತೋರುತ್ತದೆಯಾದರೂ, ಅಪರಾಧಿಗಳ ಸಂಖ್ಯೆ ಹೆಚ್ಚಿರಬಹುದು" ಎಂದು ಕುಶ್ವಾಹಾ ಹೇಳಿದರು. ಶಂಕಿತ ಹಂತಕನ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ, ಶೀಘ್ರದಲ್ಲೇ ಅವರನ್ನು ಬಂಧಿಸುವ ಭರವಸೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ







