ಅರವಿಂದ ಕೇಜ್ರಿವಾಲ್ ಮಂಡಿಸಿದ ವಿಶ್ವಾಸ ನಿರ್ಣಯ ದಿಲ್ಲಿ ವಿಧಾನಸಭೆಯಲ್ಲಿ ಅಂಗೀಕಾರ
"ದಿಲ್ಲಿಯಲ್ಲಿ ಆಪರೇಷನ್ ಕಮಲ ವಿಫಲವಾಗಿದೆ ಎಂದು ಇಂದು ನಾವು ಸಾಬೀತುಪಡಿಸಿದ್ದೇವೆ''

Photo:PTI
ಹೊಸದಿಲ್ಲಿ: ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರು ಮಂಡಿಸಿದ ವಿಶ್ವಾಸ ನಿರ್ಣಯವನ್ನು ದಿಲ್ಲಿ ವಿಧಾನಸಭೆ ಗುರುವಾರ ಅಂಗೀಕರಿಸಿತು.
ಪ್ರಸ್ತಾವನೆಗೆ ಪರ 58 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ ಯಾವುದೇ ಮತ ಚಲಾವಣೆಯಾಗಲಿಲ್ಲ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಕಲಾಪದಲ್ಲಿ ಭಾಗವಹಿಸಲಿಲ್ಲ.
ಆಗಸ್ಟ್ 29 ರಂದು ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರು, ಉದ್ದೇಶಿತ ಬಿಜೆಪಿಯ 'ಆಪರೇಷನ್ ಕಮಲ’ಇತರ ರಾಜ್ಯಗಳಲ್ಲಿ ಯಶಸ್ವಿಯಾಗಿರಬಹುದು. ಆದರೆ ದಿಲ್ಲಿಯಲ್ಲಿ ಆಪರೇಷನ್ ಕಮಲ’ ವಿಫಲವಾಗಿದೆ ಎಂದು ಇಂದು ನಾವು ಸಾಬೀತುಪಡಿಸಿದ್ದೇವೆ.
ನೀವು ಎಎಪಿಯ ಜನರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ನಾವು ದೇಶಕ್ಕೆ ಸಾಬೀತುಪಡಿಸಿದ್ದೇವೆ. ಅವರು ಎಎಪಿಯ ಒಬ್ಬ ಶಾಸಕನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Next Story





