ಸಾಗರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಾಗರ : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಸೊರಬ ತಾಲೂಕಿನ ಕಚವಿ ಗ್ರಾಮದ ವಾಸಿ 28 ವರ್ಷದ ಸಂದೀಪ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಎಂದು ತಿಳಿದು ಬಂದಿದೆ. ಸಂದೀಪ್ ಜಡೆ ಗ್ರಾಮದ ಕೆನರಾ ಬ್ಯಾಂಕಿನಲ್ಲಿ ಸಾಲಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ>>> ಭಾರತದಲ್ಲಿ ಕಳೆದ ವರ್ಷ ಆತ್ಮಹತ್ಯೆಗೈದವರಲ್ಲಿ ಶೇ. 25ರಷ್ಟು ಮಂದಿ ದಿನಗೂಲಿ ಕಾರ್ಮಿಕರು: NCRB ವರದಿ
ಭಾರೀ ಮಳೆಯಿಂದಾಗಿ ಫಸಲು ಕೊಚ್ಚಿಕೊಂಡು ಹೋಗಿದ್ದು, ನಷ್ಟ ಉಂಟಾಗಿದೆ. ಇದರಿಂದ ಮನನೊಂದ ವಿಷ ಸೇವಿಸಿದ್ದಾರೆ.
ತಕ್ಷಣ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ರೈತ ಸಂದೀಪ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೃತನ ತಮ್ಮ ಲಿಂಗರಾಜು ದೂರು ಸಲ್ಲಿಸಿದ್ದಾರೆ.
Next Story





