7 ತಿಂಗಳಿನಿಂದ ಸಂಬಳ ನೀಡದ ಖಾಸಗಿ ಕಂಪನಿ: ಆತ್ಮಹತ್ಯೆಗೆ ಯತ್ನಿಸಿದ ಉದ್ಯೋಗಿಗಳು

ಭೋಪಾಲ್: ಏಳು ತಿಂಗಳಿನಿಂದ ಸಂಬಳ ನೀಡದ ಖಾಸಗಿ ಕಂಪನಿಯ ಏಳು ಉದ್ಯೋಗಿಗಳು ಇಂದೋರ್‌ನ ಕಾರ್ಖಾನೆಯೊಂದರಲ್ಲಿ ವಿಷ ಸೇವಿಸಿ (Not Paid For Months, 7 Workers At Indore Factory Take Poison)ತಮ್ಮ ಜೀವನವನ್ನು ಅಂತ್ಯಗೊಳಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಉದ್ಯೋಗಿಗಳನ್ನು ಸರಕಾರಿ ಎಂವೈ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ನಿಯಮಿತವಾಗಿ ವೇತನ ನೀಡಿಲ್ಲ, ಅವರನ್ನು ಬೇರೆ ಶಾಖೆಗೆ ವರ್ಗಾಯಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
"ಕಳೆದ ಕೆಲವು ತಿಂಗಳಿಂದ ನಮಗೆ ಆಡಳಿತ ಮಂಡಳಿಯಿಂದ ಸಂಬಳ ನೀಡಲಾಗಿಲ್ಲ. ಅದಕ್ಕಾಗಿಯೇ ನಮ್ಮ ಸ್ನೇಹಿತರು ವಿಷ ಸೇವಿಸಿದ್ದಾರೆ" ಎಂದು ಉದ್ಯೋಗಿ ಅನಿಲ್ ನಿಗಮ್ ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಕುಶ್ವಾಹ ಮಾತನಾಡಿ, ಕಾರ್ಖಾನೆಯ ಕಾರ್ಮಿಕರಿಗೆ ಕಳೆದ ಏಳು ತಿಂಗಳಿಂದ ಸಂಬಳ ನೀಡಿಲ್ಲ. ಅವರು ಮಾಡ್ಯುಲರ್ ಕಿಚನ್‌ಗಳಿಗೆ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಂಗಾಂಗದ ಮತ್ತೊಂದು ಕಾರ್ಖಾನೆಯಲ್ಲಿ ಕೆಲಸ ಮಾಡಲು ಸಹ ಸ್ಥಳಾಂತರಿಸಲಾಗಿದೆ. ನಾವು ಸಂಪೂರ್ಣ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಹೇಳಿದರು.







