ಯುಎಸ್ ಓಪನ್: ಡಬಲ್ಸ್ನಿಂದ ಸೆರೆನಾ , ವೀನಸ್ ವಿಲಿಯಮ್ಸ್ ಔಟ್

ವೀನಸ್, ಸೆರೆನಾ Photo:twitter
ನ್ಯೂಯಾರ್ಕ್: ಅಮೆರಿಕನ್ ಓಪನ್ನಲ್ಲಿ ಸೆರೆನಾ ಹಾಗೂ ವೀನಸ್ ವಿಲಿಯಮ್ಸ್ (Serena And Venus Williams)ಅವರ ಗ್ರ್ಯಾನ್ ಸ್ಲಾಮ್ ಡಬಲ್ಸ್ ವೃತ್ತಿಜೀವನವು ಹಠಾತ್ತನೆ ಅಂತ್ಯಗೊಂಡಿದೆ. ಮತ್ತೆ ಜೊತೆಯಾದ ಸಹೋದರಿಯರು ಮೊದಲ ಸುತ್ತಿನಲ್ಲಿ ಝೆಕ್ ಜೋಡಿಯಾದ ಲೂಸಿ ಹ್ರಾಡೆಕಾ ಮತ್ತು ಲಿಂಡಾ ನೊಸ್ಕೋವಾ ವಿರುದ್ಧ ಪರಾಭವಗೊಂಡರು.
ವಿಲಿಯಮ್ಸ್ ಸಹೋದರಿಯರು ಹೆಚ್ಚುಕಡಿಮೆ ಕೊನೆಯ ಬಾರಿ ಗ್ರ್ಯಾನ್ ಸ್ಲಾಮ್ ಡಬಲ್ಸ್ ಜೋಡಿಯಾಗಿ ಕಣಕ್ಕಿಳಿದರು. ಆರ್ಥರ್ ಆಶ್ ಸ್ಟೇಡಿಯಂನಲ್ಲಿನಡೆದ ಸೆಣಸಾಟದಲ್ಲಿ 7-6 (7/5), 6-4 ಅಂತರದಲ್ಲಿ ಸೋತರು.
14 ಗ್ರ್ಯಾನ್ ಸ್ಲಾಮ್ ಕಿರೀಟಗಳು ಹಾಗೂ ಮೂರು ಒಲಿಂಪಿಕ್ ಚಿನ್ನದ ಪದಕಗಳ ವಿಜೇತರಾದ ಅಮೆರಿಕನ್ ಸಹೋದರಿಯರು 2018 ರಿಂದ ಡಬಲ್ಸ್ ಪಂದ್ಯಾವಳಿಯಲ್ಲಿ ಒಟ್ಟಿಗೆ ಆಡಿರಲಿಲ್ಲ.
ಆದರೆ ಸೆರೆನಾ ಅವರು ಪಂದ್ಯಾವಳಿಯ ನಂತರ ನಿವೃತ್ತಿ ಹೊಂದಲು ಯೋಜಿಸಿದ ಕೆಲವೇ ವಾರಗಳ ನಂತರ ಈ ವರ್ಷದ ಯುಎಸ್ ಓಪನ್ ಡ್ರಾದಲ್ಲಿ ಈ ಇಬ್ಬರಿಗೆ ವೈಲ್ಡ್ ಕಾರ್ಡ್ ಅನ್ನು ಹಸ್ತಾಂತರಿಸಲಾಯಿತು.
Next Story





