Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮೋದಿಯವರೇ, ರಾಜ್ಯ ಬಿಜೆಪಿ ಸರಕಾರದ 40%...

ಮೋದಿಯವರೇ, ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ದಂಧೆ, ಹಗರಣಗಳ ಕುರಿತು ಮಾತನಾಡುವಿರಾ: ದಿನೇಶ್ ಗುಂಡೂರಾವ್ ಪ್ರಶ್ನೆ

ವಾರ್ತಾಭಾರತಿವಾರ್ತಾಭಾರತಿ2 Sept 2022 11:21 AM IST
share
ಮೋದಿಯವರೇ, ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ದಂಧೆ, ಹಗರಣಗಳ ಕುರಿತು ಮಾತನಾಡುವಿರಾ: ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು, ಸೆ.2: "ಇಂದು‌ ಮಂಗಳೂರಿಗೆ ಬರುತ್ತಿರುವ ಮೋದಿಯವರಿಗೆ ಸ್ವಾಗತ. ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ. ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು. ಮೋದಿಯವರೆ ಇಂದಾದರೂ ಹೇಳಿದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ  ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ.?" ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯ BJP ಸರ್ಕಾರದ 40% ಕಮಿಷನ್ ದಂಧೆ, PSI ಹಗರಣ, KPTCL ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಜ್ಯೂ.ಇಂಜಿನಿಯರ್ ನೇಮಕಾತಿ ಹಗರಣ ಹಾಗೂ ನಿಮ್ಮ ಪಕ್ಷ 2018ರ ಪ್ರಣಾಳಿಕೆಯಲ್ಲಿ 600 ವಚನ ಕೊಟ್ಟು ಒಂದನ್ನೂ ಈಡೇರಿಸದೆ ವಚನ ವಂಚನೆಯ ಬಗ್ಗೆ ಮಾತಾಡುವಿರಾ.? ನಿಮ್ಮ ಪಾರದರ್ಶಕತೆಗೆ ಸವಾಲು ಇದು." ಎಂದು ಹೇಳಿದ್ದಾರೆ.

"ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ GST ಬಾಕಿ ಯಾಕೆ ಕೊಟ್ಟಿಲ್ಲ, 15ನೇ ಹಣಕಾಸು ಆಯೋಗ ನೀಡಿದ್ದ ವಿಶೇಷ ಅನುಧಾನ ರಾಜ್ಯಕ್ಕೆ ಕೊಡದಿರುವುದು ಯಾಕೆ ? 2014ರಲ್ಲಿ 52 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲ ನಿಮ್ಮ ಅಧಿಕಾರಾವಧಿಯಲ್ಲಿ 1.42 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು ಯಾಕೆ.? ಎಂಬ ಬಗ್ಗೆ ದಯವಿಟ್ಟು ಮಾತನಾಡುವಿರಾ.?" ಎಂದು ಪ್ರಶ್ನಿಸಿದ್ದಾರೆ.

ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ತೈಲಬೆಲೆ ಯದ್ವಾತದ್ವಾ ಏರಿಕೆಯಾಗಿದ್ದು ಯಾಕೆ.? ರೂ.80 ಇದ್ದ ಅಡುಗೆ ಎಣ್ಣೆ ರೂ.180ರ ಗಡಿ ದಾಟಿದ್ದು ಯಾಕೆ.? ರೂ.400 ಇದ್ದ ಸಿಲಿಂಡರ್ ಬೆಲೆ ಸಾವಿರ ತಲುಪಿದ್ದು ಹೇಗೆ? ರೂ.30 ಇದ್ದ ಸಾಬೂನು ರೂ.60 ಆಗಿದ್ದು ಹೇಗೆ? ತಿನ್ನುವ ಅನ್ನಕ್ಕೂ ನಿಮ್ಮ‌ ಸರ್ಕಾರ GST ಹಾಕಿ ದೋಚುತ್ತಿರುವ ಬಗ್ಗೆ ಮಾತನಾಡುವಿರಾ.?

ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ PM Cares ಹೆಸರಲ್ಲಿ ಸಂಗ್ರಹಿಸಿದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? ಆಪರೇಷನ್ ಕಮಲಕ್ಕೆ ಬಳಕೆಯಾಗುವ ದುಡ್ಡಿನ ಮೂಲ ಯಾವುದು? BJPಯವರ ಮೇಲೆ ED, IT ಮತ್ತು CBI ದಾಳಿ ನಡೆಯದ ರಹಸ್ಯವೇನು.? ರೈತರ ಸಾಲ ಮನ್ನಾ ಮಾಡದೆ ಕಾರ್ಪೊರೇಟ್ ಕುಳಗಳ ಲಕ್ಷ ಲಕ್ಷ ಕೋಟಿ ರೂ. ತೆರಿಗೆ ಮನ್ನಾ ಮಾಡಿದ ಬಗ್ಗೆ ಮಾತನಾಡುವಿರಾ.? ಎಂದು ಸವಾಲೆಸೆದಿದ್ದಾರೆ.

1
ಇಂದು‌ ಮಂಗಳೂರಿಗೆ ಬರುತ್ತಿರುವ #Modi ಯವರಿಗೆ ಸ್ವಾಗತ.
ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ.

ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು.

ಮೋದಿಯವರೆ ಇಂದಾದರೂ ಹೇಳಿದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ?

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 2, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X