ಪೈವಳಿಕೆ ಶೆಟ್ಟಿ ಸಹೋದರರ 64 ನೇ ಹುತಾತ್ಮ ದಿನ: ಪೈವಳಿಕೆಯಲ್ಲಿ ಬಹುಜನ ಮೆರವಣಿಗೆ, ಸಾರ್ವಜನಿಕ ಸಭೆ

ಮಂಜೇಶ್ವರ, ಸೆ.1: ಜಮೀನ್ದಾರಿ ಭೂ ಮಾಲಕರ ಎದುರಾಗಿ ಹೋರಾಡಿ ಹುತಾತ್ಮರಾದ ಪೈವಳಿಕೆ ಶೆಟ್ಟಿ ಸಹೋದರರ 64 ನೇ ಹುತಾತ್ಮ ದಿನದ ಅಂಗವಾಗಿ ಸಿಪಿಐ ಎಂ ಮಂಜೇಶ್ವರ ಏರಿಯಾ ಸಮಿತಿ ಆಶ್ರಯದಲ್ಲಿ ಗುರುವಾರ ಪೈವಳಿಕೆಯಲ್ಲಿ ಬಹುಜನ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಕಾಯರ್ ಕಟ್ಟೆ ಯಿಂದ ಆರಂಭಿಸಿದ ಮೆರವಣಿಗೆ ಪೈವಳಿಕೆ ನಗರದಲ್ಲಿ ಸಮಾಪ್ತಿಯಾಯಿತು.
ಸಾರ್ವಜನಿಕ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ವಿ ಬಾಲಕೃಷ್ಣನ್ ಮಾಸ್ಟರ್ ಉದ್ಘಾಟಿಸಿದರು.
ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಧಾನ ಭಾಷಣ ಮಾಡಿದರು.
ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯ ಕೆ.ಆರ್.ಜಯಾನಂದ, ಚಂದ್ರಹಾಸ ಶೆಟ್ಟಿ ಮಾಸ್ಟರ್, ಪುರುಷೋತ್ತಮ ಬಲ್ಲೂರು, ಹಾರಿಸ್ ಪೈವಳಿಕೆ, ವಿನಯ್ ಕುಮಾರ್ ಬಾಯಾರು, ಬಶೀರ್ ಬೀ ಎ, ಚಂದ್ರ ನಾಯ್ಕ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಸುಜಾತ ರೈ ಮತ್ತಿತರರು ಮಾತನಾಡಿದರು. ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿದರು.






.jpeg)
.jpeg)
.jpeg)
.jpeg)
.jpeg)

