ಅಲ್-ಇಹ್ಸಾನ್ ಕಬಡ್ಡಿ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕಾಪು, ಸೆ.2: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ರಾಜೀವ ನಗರ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜರಗಿದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪಡುಬೆಳ್ಳೆ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿರುವ ಮೂಳೂರು ಅಲ್-ಇಹ್ಸಾನ್ ಅಕಾಡಮಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ತಂಡದೊಂದಿಗೆ ಶಾಲಾ ಪ್ರಾಂಶುಪಾಲ ಕೆ.ಎಸ್ ಹಬೀಬುರ‌್ರಹ್ಮಾನ್, ಉಪ ಪ್ರಾಂಶುಪಾಲೆ ಅಫ್ರೀನ್ ತಬ್ರೀಝ್ ಖಾನ್, ಮುಖ್ಯೋಪಾದ್ಯಾಯಿನಿ ಯರಾದ ಮಮತಾ ಪೂಜಾರಿ, ಸೈಯದ್ ಶಬಾನಾ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಎಂ., ಸದ್ದಾಮ್ ಹುಸೇನ್, ಸುಮನಾ ಕಿಶೋರ್ ಹಾಜರಿದ್ದರು.

Next Story





