ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ

ಉಡುಪಿ, ಸೆ.2: ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಆಸಕ್ತ ಮಹಿಳೆ/ಯುವತಿಯರಿಗೆ ಸೆ.12ರಿಂದ ಗೃಹ ಉತ್ಪನ್ನಗಳಾದ ಸಾರು, ಸಾಂಬಾರು ಮತ್ತು ಕಷಾಯ ಹುಡಿ, ಪುಳಿಯೊಗರೆ ಮಿಕ್ಸ್, ಹಪ್ಪಳ, ಜ್ಯಾಮ್, ಸೆಂಡಿಗೆ, ಉಪ್ಪಿನಕಾಯಿ, ಫಿನಾಯಿಲ್ ತಯಾರಿ, ಗೃಹ ನಿರ್ವಹಣೆ, ಮೆಹೆಂದಿ, ವಿವಿಧ ರೀತಿಯ ಹೂ ಕಟ್ಟುವುದು, ಬಟ್ಟೆ ಮತ್ತು ಪೇಪರ್ ಬ್ಯಾಗ್ ಇತ್ಯಾದಿಗಳ ಕುರಿತು ೭ ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
18ರಿಂದ 45 ವರ್ಷದೊಳಗಿನ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸ ಬಹುದು. ತರಬೇತಿಯು ಉಚಿತವಾಗಿದ್ದು ಊಟದ ವ್ಯವಸ್ಥೆ ಇದೆ. ಆಸಕ್ತರು ಸೆ.೮ರೊಳಗೆ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆಯನ್ನು ಬಿಳಿಹಾಳೆಯಲ್ಲಿ ಬರೆದು ಕೆಳಗಿನ ವಿಳಾಸಕ್ಕೆ ಕಳುಹಿಸ ಬಹುದು.
ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ-ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ, ಉಡುಪಿ- ೫೭೬೧೦೨ ಅಥವಾ ದೂರವಾಣಿ ಸಂಖ್ಯೆ : 8970891031 ಸಂಪರ್ಕಿಸುವ ಮೂಲಕ ದೃಢೀಕರಿಸಬಹುದು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸೆ.12ರ ಬೆಳಿಗ್ಗೆ 9.30ಕ್ಕೆ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಹಾಜರಿರಬೇಕು ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





