ಸಹ್ಯಾದ್ರಿ ವಿದ್ಯಾರ್ಥಿಗಳಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ

ಮಂಗಳೂರು : ನಗರದ ಅಡ್ಯಾರ್‌ನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗವು ಹಮ್ಮಿಕೊಂಡ ‘ವಿದ್ಯಾರ್ಥಿಗಳಿಗಾಗಿ ರೈತರೊಂದಿಗೆ ಒಂದು ದಿನ‘ ಕಾರ್ಯಕ್ರಮ’ವು ಕಾವಳ ಪಡೂರು ಗ್ರಾಮದಲ್ಲಿ ನಡೆಯಿತು.
ಕಾವಳ ಪಡೂರು ಗ್ರಾಪಂ ಸದಸ್ಯ ಪ್ರಮೋದ್‌ರೈ ಕಾರ್ಯಕ್ರಮ ಉದ್ಘಾಟಿಸಿ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಭವಾನಿ, ಗದ್ದೆಯ ಮಾಲಕರಾದ ವಿಠ್ಠಲ ರೈ, ಗೋಪಾಲ ರೈ ಉಪಸ್ಥಿತರಿದ್ದರು.
ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ರಾಜೇಶ್ ಎಸ್., ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮುಸ್ತಫಾ ಬಸ್ತಿಕೋಡಿ ಪಾಲ್ಗೊಂಡಿದ್ದರು.
Next Story