ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.2: ಮಂಗಳೂರು ಶಾರದಾ ಮಹೋತ್ಸವ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹದ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ವೇಷಧಾರಿ, ಅರ್ಥಧಾರಿ, ಚೆಂಡೆ ಮದ್ದಳೆ ವಾದಕ, ಯಕ್ಷಗುರು, ಸಂಘಟಕ, ಕಲಾ ಪೋಷಕ ಪಿ. ಸಂಜಯ ಕುಮಾರ್ ರಾವ್‌ಗೆ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ, ವಾಗೀಶ್ವರಿ ಸಂಘದ ಗೌರವಾಧ್ಯಕ್ಷ ಎಸ್.ಪ್ರದೀಸ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಶಿವಪ್ರಸಾದ ಪ್ರಭು ಸನ್ಮಾನ ಪತ್ರ ವಾಚಿಸಿದರು. ಮಹಾಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಎ.ಎಸ್.ಎಸ್. ಕಾಮತ್ ಶುಭ ಹಾರೈಸಿದರು. ಟ್ರಸ್ಟಿ ಕೆ. ಪ್ರಕಾಶ್ ಕಾಮತ್ , ವಿದ್ವಾಂಸರಾದ ವಾಸುದೇವ ಭಟ್, ಡಾ.ಎಂ.ಪ್ರಭಾಕರ ಜೋಷಿ, ವಾಗೀಶ್ವರೀ ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಗೌರವಾಧ್ಯಕ್ಷ ಹಾಗೂ ಕಾರ್ಯಕ್ರಮದ ಪ್ರಾಯೋಜಕ ಸಿ.ಎಸ್. ಭಂಢಾರಿ, ಜಿ.ಕೆ ಭಟ್ ಸೇರಾಜೆ ಉಪಸ್ಥಿತರಿದ್ದರು.
ಪಟ್ಲ ಸತೀಶ ಶೆಟ್ಟಿಯ ಭಾಗವತಿಕೆಯಲ್ಲಿ ಶರ ಸೇತು ಬಂಧನ ಹಾಗೂ ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ ತುಳುನಾಡ ಬಲಿಯೇಂದ್ರೆ ಯಕ್ಷಗಾನ ತಾಳಮದ್ದಳೆ ನಡೆಯಿತು.