ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಸಾಂದರ್ಭಿಕ ಚಿತ್ರ
ಬೈಂದೂರು, ಸೆ.2: ಸಮುದ್ರ ಅಲೆ ಅಪ್ಪಳಿಸಿದ ಪರಿಣಾಮ ದೋಣಿಯಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಸೆ.1ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕಿರಿಮಂಜೇಶ್ವರ ಗ್ರಾಮದ ಮೋಟಿಮನೆಯ ಸತೀಶ್ ಖಾರ್ವಿ (44) ಎಂದು ಗುರುತಿಸಲಾಗಿದೆ. ಇವರು ರಾಮಚಂದ್ರ ಎಂಬವರ ಮೀನು ಗಾರಿಕೆಗಾಗಿ ತನ್ನ ಅಣ್ಣನ ಜೊತೆ ಕೊಡೇರಿ ಬಂದರಿನಿಂದ ದೋಣಿಯಲ್ಲಿ ಬಲೆ ಯೊಂದಿಗೆ ಸಮುದ್ರಕ್ಕೆ ಹೋಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ದೊಡ್ಡದಾದ ಅಲೆ ದೋಣಿಗೆ ಅಪ್ಪಳಿಸಿತ್ತೆನ್ನಲಾಗಿದೆ.
ಇದರ ಪರಿಣಾಮ ದೋಣಿಯಲ್ಲಿದ್ದ ಸತೀಶ್ ಖಾರ್ವಿ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದರೆಂದು ತಿಳಿದುಬಂದಿದೆ. ಕೂಡಲೇ ಅವರನ್ನು ಮೇಲಕ್ಕೆ ಎತ್ತಿ ತೀರಕ್ಕೆ ಕರೆತಂದರು. ಅಲ್ಲಿಂದ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸತೀಶ್ ಖಾರ್ವಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





