ಕೆ.ಬಿ.ನಾಯಕ್ ವಿರುದ್ಧದ ದೂರು ಕೈಬಿಟ್ಟ ವಿಚಾರ: ಕೆಎಸ್‍ಬಿಸಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಸೆ.2: ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್‍ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಬಿ.ನಾಯಕ್ ವಿರುದ್ಧದ ದೂರನ್ನು ಕೈಬಿಟ್ಟಿರುವುದರ ಕುರಿತಾದ ಪ್ರಮಾಣಿಕೃತ ಗೊತ್ತುವಳಿ ನೀಡುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೆಎಸ್‍ಬಿಸಿಗೆ ನೋಟಿಸ್ ಜಾರಿ ಮಾಡಿದೆ.
ಬೆಳಗಾವಿಯ ವಕೀಲ ಬಸವರಾಜ್ ಮುರುಗೇಶ್ ಜರಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ನೋಟಿಸ್ ಜಾರಿ ಮಾಡಿದೆ.
ಹಿರಿಯ ವಕೀಲ ಕೆ.ಬಿ.ನಾಯಕ್ ಅವರ ವಿರುದ್ಧದ ದೂರನ್ನು ಶಿಸ್ತುಪಾಲನ ಸಮಿತಿಗೆ ಪರಿಶೀಲಿಸಲು ಆದೇಶಿಸದೆ ಹಿಂದೆ ಸರಿಯುವ ಮೂಲಕ ಕೆಎಸ್‍ಬಿಸಿ ಸ್ವಇಚ್ಛೆಯಿಂದ ನಡೆದುಕೊಂಡಿದೆ.
ವಕೀಲರ ಕಾಯಿದೆ ಅನ್ವಯ ಕಾನೂನು ರೀತಿಯ ಪ್ರಮಾಣಿಕೃತ ಎತ್ತಿ ಹಿಡಿಯುವುದು ಪರಿಷತ್‍ನ ಕರ್ತವ್ಯವಾಗಿದೆ. ಹಲವು ಕೋರಿಕೆ ಸಲ್ಲಿಸಿದರೂ ಕೆಎಸ್‍ಬಿಸಿಯ ಪ್ರಮಾಣಿಕೃತ ಅರ್ಜಿಯನ್ನು ಅರ್ಜಿದಾರರಿಗೆ ನೀಡಿಲ್ಲ. ಇದು ಆಕ್ಷೇಪಾರ್ಹ ನಡೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Next Story





