ಮ್ಯಾನ್ಮಾರ್: ಆಂಗ್ ಸಾನ್ ಸೂಕಿಗೆ 3 ವರ್ಷ ಜೈಲು ಶಿಕ್ಷೆ

ಯಾಂಗ್ಯಾನ್, ಸೆ.೨: ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಮ್ಯಾನ್ಮಾರ್ನ ಪದಚ್ಯುತ ನಾಯಕಿ ಆಂಗ್ ಸ್ಯಾನ್ ಸೂಕಿಗೆ ಅಲ್ಲಿನ ನ್ಯಾಯಾಲಯ ದುಡಿಮೆ ಸಹಿತ ೩ ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.
೨೦೨೦ರ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿರುವುದರಿಂದ ಈ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೇನೆ ಪ್ರತಿಪಾದಿಸಿತ್ತು. ೨೦೨೧ರಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಸೂಕಿ ಸರಕಾರವನ್ನು ಸೇನೆ ಪದಚ್ಯುತಗೊಳಿಸಿ ಅಧಿಕಾರ ಪಡೆದಿದೆ. ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಬ್ಯಾಂಕಾಕ್ ಮೂಲದ `ಏಶಿಯನ್ ನೆಟ್ವರ್ಕ್ ಫಾರ್ ಫ್ರೀ ಇಲೆಕ್ಷನ್'ನ ವಕ್ತಾರರು ಹೇಳಿದ್ದಾರೆ.
ಸೂಕಿ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ಇದುವರೆಗೆ ೧೭ ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.
Next Story





