Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರೆಸ್ಸೆಸ್ ನಿಂದಲೇ ಬಾಂಬ್ ಸ್ಫೋಟ: ಆರೋಪ...

ಆರೆಸ್ಸೆಸ್ ನಿಂದಲೇ ಬಾಂಬ್ ಸ್ಫೋಟ: ಆರೋಪ ಮಾಡಿದ ಮಾಜಿ ಪ್ರಚಾರಕನ ಅಫಿಡವಿಟ್ ನಲ್ಲಿ ಇರುವ ಸ್ಪೋಟಕ ವಿವರಗಳೇನು?

ಎಟಿಎಸ್ ದೋಷಾರೋಪ ಪಟ್ಟಿಗೂ, ಶಿಂಧೆ ಹೇಳಿಕೆಗೂ...

ವಾರ್ತಾಭಾರತಿವಾರ್ತಾಭಾರತಿ2 Sept 2022 10:44 PM IST
share
ಆರೆಸ್ಸೆಸ್ ನಿಂದಲೇ ಬಾಂಬ್ ಸ್ಫೋಟ: ಆರೋಪ ಮಾಡಿದ ಮಾಜಿ ಪ್ರಚಾರಕನ ಅಫಿಡವಿಟ್ ನಲ್ಲಿ ಇರುವ ಸ್ಪೋಟಕ ವಿವರಗಳೇನು?

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾಜಿ ಪ್ರಚಾರಕ ಯಶವಂತ್‌ ಶಿಂಧೆ ಅವರು ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ 2000 ರ ದಶಕದಲ್ಲಿ ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಹಲವಾರು ಬಾಂಬ್ ಸ್ಫೋಟಗಳನ್ನು ನಡೆಸಿವೆ ಎಂದು ಆರೋಪಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಹಲವಾರು ಹಿಂದುತ್ವ ಗುಂಪುಗಳಿಗೆ ಮೂಲ ಸಂಘಟನೆ ಮತ್ತು ಸೈದ್ಧಾಂತಿಕ ಬೆನ್ನೆಲುಬಾಗಿರುವ ಆರ್‌ಎಸ್‌ಎಸ್‌ ಜೊತೆಗೆ ತನಗೆ 1990 ರಿಂದ ಸಂಬಂಧವಿದೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ.

ಆಗಸ್ಟ್ 29 ರಂದು ನಾಂದೇಡ್ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಆರ್‌ಎಸ್‌ಎಸ್‌ ವಿರುದ್ಧ ಶಿಂಧೆ ಈ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ನಾಂದೇಡ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಸಾಕ್ಷಿಯನ್ನಾಗಿ ಮಾಡುವಂತೆ ಶಿಂಧೆ ನ್ಯಾಯಾಲಯವನ್ನು ಕೋರಿದ್ದಾರೆ. 2006 ರಲ್ಲಿ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಯುವ ಘಟಕವಾದ ಬಜರಂಗ ದಳದ ಕಾರ್ಯಕರ್ತ ಸೇರಿದಂತೆ ಇಬ್ಬರು ವ್ಯಕ್ತಿಗಳು ಬಾಂಬ್‌ ತಯಾರಿಸುತ್ತಿದ್ದಾಗ ಸ್ಪೋಟಗೊಂಡು ಮೃತಪಟ್ಟಿದ್ದರು.

ನಾಂದೇಡ್‌ ನಲ್ಲಿ ಸ್ಪೋಟವಾದ ಬಾಂಬನ್ನು ಔರಂಗಾಬಾದ್ ಜಿಲ್ಲೆಯ ಮಸೀದಿಯೊಂದರ ಮೇಲೆ ದಾಳಿ ನಡೆಸಲು ಬಾಂಬ್ ಸಿದ್ಧಪಡಿಸಲಾಗುತ್ತಿತ್ತು ಎಂದು ಶಿಂಧೆ ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ.

ಮರಣ ಹೊಂದಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ಹಿಮಾಂಶು ಪಾನ್ಸೆ ಅವರು ಹಿಂದುತ್ವ ಸಂಘಟನೆಗಳ ವಲಯದಲ್ಲಿ ತಮ್ಮ ದೀರ್ಘಕಾಲದ ಸಹವರ್ತಿಯಾಗಿದ್ದರಿಂದ ಶಿಂಧೆ ಅವರು ಈ ಘಟನೆ ಬಗ್ಗೆ ಅರಿವಿತ್ತು ಎಂದು ತಿಳಿಸಿದ್ದಾರೆ. ಸ್ಪೋಟದಲ್ಲಿ ಮೃತರಾದ ಪನ್ಸೆ ಕೂಡಾ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿದ್ದ ಎಂದು ಅಫಿಡವಿಟ್ ನಲ್ಲಿ ಅವರು ಹೇಳಿದ್ದಾರೆ.

1999 ರಲ್ಲಿ, ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಯಾದ ಇಂದ್ರೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಶಿಂಧೆ ಅವರು "ಹಿಮಾನ್ಶು ಮತ್ತು ಅವರ 7 ಸ್ನೇಹಿತರನ್ನು ಜಮ್ಮುವಿಗೆ ಕರೆದೊಯ್ದರು ...[ಅಲ್ಲಿ] ಅವರು ಭಾರತೀಯ ಸೇನೆಯ ಜವಾನರಿಂದ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ಪಡೆದರು" ಎಂದು ಅವರು ಹೇಳಿದ್ದಾರೆ.

ಅಲ್ಲದೆ, ನಾಲ್ಕು ವರ್ಷಗಳ ನಂತರ, ಅಂದರೆ 2003 ರಲ್ಲಿ, ತಾನು ಮತ್ತು ಪನ್ಸೆ ಪುಣೆಯ ಸಿಂಘಡ್ ಬಳಿ ನಡೆದ ಬಾಂಬ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಶಿಂಧೆ ಹೇಳಿದ್ದಾರೆ.

ಪ್ರಸ್ತುತ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಸಂಘಟಕರಾಗಿರುವ ಮಿಲಿಂದ್ ಪರಾಂಡೆ ಅವರು ಶಿಬಿರದ ಮಾಸ್ಟರ್ ಮೈಂಡ್ ಮತ್ತು ಮುಖ್ಯ ಸಂಘಟಕರು ಎಂದು ಶಿಂಧೆ ಹೇಳಿದ್ದಾರೆ. ಶಿಬಿರದ ಮುಖ್ಯ ಬೋಧಕ "ಮಿಥುನ್ ಚಕ್ರವರ್ತಿ" ಎಂಬ ಹೆಸರಿನ ವ್ಯಕ್ತಿಯಾಗಿದ್ದು, ಆತನ ನಿಜವಾದ ಹೆಸರು, ರವಿ ದೇವ್ ಆನಂದ್ ಆಗಿತ್ತು ಎಂದು ನಂತರ ತಿಳಿದು ಬಂದಿತ್ತು ಎಂದು ಅವರು ತಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಆ ಸಮಯದಲ್ಲಿ ಅವರು ವಿಶ್ವ ಹಿಂದೂ ಪರಿಷತ್ತಿನ ಉತ್ತರಾಖಂಡ ಘಟಕದ ಮುಖ್ಯಸ್ಥರಾಗಿದ್ದರು.

ಶಿಂಧೆ ತಮ್ಮ ಅಫಿಡವಿಟ್‌ನಲ್ಲಿ ತರಬೇತಿ ಶಿಬಿರದಲ್ಲಿ ಏನಾಗುತ್ತಿತ್ತು ಎಂದು ವಿವರಿಸಿದ್ದಾರೆ:

ಮಿಥುನ್ ಚಕ್ರವರ್ತಿ ಶಿಬಿರವನ್ನು ಬೆಳಿಗ್ಗೆ 10 ಗಂಟೆಗೆ ತಲುಪುತ್ತಿದ್ದ ಹಾಗೂ ಎರಡು ಗಂಟೆಗಳ ಕಾಲ ವಿವಿಧ ಗುಂಪುಗಳಲ್ಲಿ ತರಬೇತಿಯನ್ನು ನೀಡುತ್ತಿದ್ದ. ತರಬೇತಿ ಪಡೆದವರಿಗೆ 3-4 ಬಗೆಯ ಸ್ಫೋಟಕ ಪೌಡರ್‌ಗಳು, ಪೈಪ್‌ಗಳ ತುಂಡುಗಳು, ತಂತಿಗಳು, ಬಲ್ಬ್‌ಗಳು, ವಾಚ್‌ಗಳು ಇತ್ಯಾದಿಗಳನ್ನು ಬಾಂಬ್‌ಗಳನ್ನು ಸಿದ್ಧಪಡಿಸಲು ನೀಡಲಾಗಿತ್ತು.

ತರಬೇತಿಯ ನಂತರ ಸಂಘಟಕರು ತರಬೇತಿ ಪಡೆದವರನ್ನು ವಾಹನದಲ್ಲಿ ಏಕಾಂತ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸ್ಫೋಟಗಳ ಪೂರ್ವಾಭ್ಯಾಸವನ್ನು ನಡೆಸುವ ಮೂಲಕ ಬಾಂಬ್‌ಗಳನ್ನು ಪರೀಕ್ಷಿಸಿದರು. ತರಬೇತಿ ಪಡೆದವರು ಸಣ್ಣ ಹೊಂಡವನ್ನು ಅಗೆದು, ಅದರಲ್ಲಿ ಟೈಮರ್ ಇರುವ ಬಾಂಬ್ ಅನ್ನು ಹಾಕಿ, ಅದನ್ನು ಮಣ್ಣು ಮತ್ತು ದೊಡ್ಡ ಬಂಡೆಗಳಿಂದ ಮುಚ್ಚಿ ಬಾಂಬ್ ಸ್ಫೋಟಿಸುತ್ತಾರೆ. ಅವರ ಪರೀಕ್ಷೆಗಳು ಯಶಸ್ವಿಯಾಗಿದ್ದು, ದೊಡ್ಡ ಸ್ಫೋಟಗಳು ಸಂಭವಿಸಿದವು ಮತ್ತು ಸ್ಪೋಟದ ತೀವ್ರತೆಗೆ ಬಂಡೆಗಳು ದೂರದವರೆಗೆ ಎಸೆಯಲ್ಪಟ್ಟಿತ್ತು ಎಂದು ಅಫಿಡವಿಟ್‌ ನಲ್ಲಿ ಶಿಂಧೆ ವಿವರಿಸಿದ್ದಾರೆ.

ಎಟಿಎಸ್ ಆರೋಪಪಟ್ಟಿಯೊಂದಿಗೆ ತಾಳೆಯಾದ ಶಿಂಧೆ ಆರೋಪ

ಶಿಂಧೆ ಅವರು ಯಾವುದೇ ಸ್ಫೋಟಗಳನ್ನು ನಡೆಸದಂತೆ ಪನ್ಸೆಯನ್ನು ತಡೆಯಲು ಪ್ರಯತ್ನಿಸಿದರು ಆದರೆ "ತರಬೇತಿ ನಂತರ ಹಿಮಾಂಶು ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಮೂರು ಸ್ಫೋಟಗಳನ್ನು ಮಾಡಿದರು" ಎಂದು ಹೇಳಿದ್ದಾರೆ. "ಅವರು ಔರಂಗಾಬಾದ್‌ನ ಮುಖ್ಯ ಮಸೀದಿಯಲ್ಲಿ ದೊಡ್ಡ ಸ್ಫೋಟವನ್ನು ಉಂಟುಮಾಡುವ ಯೋಜನೆಯನ್ನು ಹೊಂದಿದ್ದರು ಮತ್ತು ಆ ಸ್ಫೋಟಕ್ಕಾಗಿ ಬಾಂಬ್ ತಯಾರಿಸುವಾಗ ಅವರು 2006 ರಲ್ಲಿ ನಾಂದೇಡ್‌ನಲ್ಲಿ ಪ್ರಾಣ ಕಳೆದುಕೊಂಡರು" ಎಂದು ಅವರು ಆರೋಪಿಸಿದ್ದಾರೆ.

ಶಿಂಧೆ ಅವರು ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿರುವ ಹೆಚ್ಚಿನವು ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮೊದಲ ಚಾರ್ಜ್‌ಶೀಟ್‌ನಲ್ಲೂ ಉಲ್ಲೇಖವಾಗಿರುವುದು ಗಮನಾರ್ಹ. 2003ರಲ್ಲಿ ಮಿಥುನ್ ಚಕ್ರವರ್ತಿ ಎಂಬ ವ್ಯಕ್ತಿಯಿಂದ ಪೈಪ್ ಬಾಂಬ್ ತಯಾರಿಸುವ ತರಬೇತಿಗಾಗಿ ಪನ್ಸೆ ಅವರು ಪುಣೆ ಬಳಿಯ ಸಿಂಹಗಡದಲ್ಲಿರುವ ರೆಸಾರ್ಟ್‌ಗೆ ಹೋಗಿದ್ದರು ಎಂದು ಎಟಿಎಸ್‌ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಇದಲ್ಲದೆ, ಪುಣೆಯ ನಿವೃತ್ತ ನೌಕಾಪಡೆಯ ಅಧಿಕಾರಿ ಸನತ್‌ಕುಮಾರ್ ರಾಗ್ವಿಠಲ್ ಭಾಟೆ ಅವರು ಭಯೋತ್ಪಾದನಾ ನಿಗ್ರಹ ದಳಕ್ಕೆ "ನಗರದ ಶಿಬಿರದಲ್ಲಿ ತಮ್ಮ ಕಾರ್ಯಕರ್ತರಿಗೆ ಜಿಲೆಟಿನ್ ಸ್ಟಿಕ್‌ಗಳ ಬಳಕೆಯ ತರಬೇತಿ ನೀಡುವಂತೆ ಪರಾಡೆ ಕೇಳಿಕೊಂಡಿದ್ದ”  ಎಂದು ಬಹಿರಂಗಪಡಿಸಿದ್ದ ಎಂದು ವರದಿಯಾಗಿದೆ.
 

ಇದನ್ನೂ ಓದಿ: ಬಿಜೆಪಿ ಗೆಲುವಿಗಾಗಿ ಆರೆಸ್ಸೆಸ್ ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿದೆ: ಮಾಜಿ ಪ್ರಚಾರಕ ಯಶವಂತ ಶಿಂಧೆ ಗಂಭೀರ ಆರೋಪ

ಅಲ್ಲದೆ, ಪನ್ಸೆ ತನ್ನ ಜೀವವನ್ನು ಕಳೆದುಕೊಂಡ ಸ್ಫೋಟ ಸಂಭವಿಸಿದ ಮನೆಯಿಂದ ಔರಂಗಾಬಾದ್‌ನಲ್ಲಿರುವ ಮಸೀದಿಯನ್ನು ಹೊಡೆಯುವ ಯೋಜನೆ ಇತ್ತು ಎಂದು ಸೂಚಿಸುವ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದಾಗ್ಯೂ, 2013 ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳ, ಸ್ಫೋಟವು ಒಂದು ಪ್ರತ್ಯೇಕ ಘಟನೆ ಎಂದು ಪ್ರತಿಪಾದಿಸಿತ್ತು.

ಆದರೆ ಶಿಂಧೆ ಅವರ ಅಫಿಡವಿಟ್ ಈ ಪ್ರತಿಪಾದನೆಯನ್ನು ಅಲ್ಲಗೆಳೆದಿದೆ. ಅವರ ಪ್ರಕಾರ, ಬಾಂಬ್ ತಯಾರಿಕೆ ಶಿಬಿರದಲ್ಲಿದ್ದ ಇತರ ಜನರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ರಾಕೇಶ್ ಧಾವಡೆ ಕೂಡ ಇದ್ದರು.

2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಮತ್ತು 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಸೇರಿದಂತೆ 2000ನೇ ಇಸವಿಯಲ್ಲಿ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳು ನಾಂದೇಡ್ ಸ್ಫೋಟದ ರೀತಿಯ ಪಿತೂರಿಯಿಂದ ಹುಟ್ಟಿಕೊಂಡಿವೆ, "ನಾಂದೇಡ್ ಕೇವಲ ಒಂದು ಸಣ್ಣ ಭಾಗವಾಗಿತ್ತು"  ಎಂದು ಶಿಂಧೆ Scroll.in ಗೆ ತಿಳಿಸಿದ್ದಾರೆ.

 ಶಿಂಧೆ ಅವರು ಪಡಾರೆಯವ ಕುತಂತ್ರಗಳ ಬಗ್ಗೆ ಎಚ್ಚರಿಕೆ ನೀಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವಾರು ಹಿರಿಯ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ, ಆದರೆ ಪ್ರಸ್ತುತ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

“ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಯ ಹಿರಿಯ ನಾಯಕರು ಭಯೋತ್ಪಾದಕ ಚಟುವಟಿಕೆಗಳನ್ನು ಮೌನವಾಗಿ ಬೆಂಬಲಿಸುತ್ತಾರೆ ಮತ್ತು 2014 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಚಟುವಟಿಕೆಗಳಲ್ಲಿ ಮತ್ತಷ್ಟು ತೊಡಗಿದ್ದಾರೆ ಮತ್ತು ಪ್ರೋತ್ಸಾಹಿಸಲಾಗಿದೆ ಎಂಬ ತೀರ್ಮಾನಕ್ಕೆ ಶಿಂಧೆ ಬಂದರು.,'' ಎಂದು ಅಫಿಡವಿಟ್‌ ನಲ್ಲಿ ತಿಳಿಸಿದ್ದಾರೆ.

ಈಗ ಈ ಅಫಿಡವಿಟ್ ಅನ್ನು ಸಲ್ಲಿಸುವ ನಿರ್ಧಾರ ಹಿಂದಿನ ಕಾರಣದ ಕುರಿತು Scroll.in ಜೊತೆ ಶಿಂಧೆ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು "ಶುದ್ಧೀಕರಿಸುವ" ಅವರ ಬಯಕೆಯಿಂದ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ ಅವರು ಹೇಳಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಸಂಘವು ತಪ್ಪು ಕೈಗೆ ಬಿದ್ದಿದೆ" ಎಂದು ಅವರು ಭಾವಿಸಿದ್ದಾರೆ.

ಶಿಂಧೆ ಹೃದಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯಕ್ತಿ ಮತ್ತು ಹಿಂದುತ್ವ ಸಿದ್ಧಾಂತದಲ್ಲಿ ದೃಢವಾದ ನಂಬಿಕೆಯುಳ್ಳವರು, ಆದ್ದರಿಂದ ಅವರು ಸಂಘಟನೆಗೆ ಕೆಟ್ಟ ಹೆಸರು ತರಲು ಬಯಸಿರಲಿಲ್ಲ, ಹಾಗಾಗಿ ಇದುವರೆಗೂ ಆ ಬಗ್ಗೆ ಮೌನವಾಗಿದ್ದೆ ಎಂದು ಹೇಳಿದರು. ಪ್ರಸ್ತುತ ನಿರುದ್ಯೋಗಿಯಾಗಿರುವ 49 ವರ್ಷದ ಮುಂಬೈನ ಲೋವರ್ ಪರೇಲ್‌ನಲ್ಲಿ ತನ್ನ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

 "ನಾನು ಅನೇಕ ಹಿರಿಯ ಜನರೊಂದಿಗೆ ಮಾತನಾಡಿದ್ದೇನೆ, ಕ್ರಮ ಕೈಗೊಳ್ಳುವಂತೆ ಮಾಡಲು ತುಂಬಾ ಪ್ರಯತ್ನಿಸಿದೆ, ಆದರೆ ಅವರು ಮಾಡಲಿಲ್ಲ” ಎಂದು ಶಿಂಧೆ ಹೇಳಿದ್ದಾರೆ.

ಇಂದ್ರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತನ್ನ ಮೊದಲ ಒಂಬತ್ತು ವರ್ಷಗಳನ್ನು ಕಳೆದಿದ್ದೇನೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ. ಆ ಅಧಿಕಾರಾವಧಿಯಲ್ಲಿ ಅವರು ಪಾನ್ಸೆ ಮತ್ತು ಇತರ ಒಂಬತ್ತು ಮಂದಿಯನ್ನು ಜಮ್ಮುವಿನಲ್ಲಿ ಭಾರತೀಯ ಸೇನಾ ಯೋಧರು ನೀಡಿದ "ಆಧುನಿಕ ಶಸ್ತ್ರಾಸ್ತ್ರ" ತರಬೇತಿಗೆ ಹಾಜರಾಗಲು ಕರೆದೊಯ್ದರು. "ಇದು ಜಮ್ಮುವಿನ ತಲಾಬ್ ಟಿಲ್ಲೋ ಎಂಬ ಸ್ಥಳದಲ್ಲಿ ನಡೆಯಿತು" ಎಂದು ಶಿಂಧೆ ಹೇಳಿದ್ದಾರೆ.

1999 ರಲ್ಲಿ, ಶಿಂಧೆ ಅವರು ಮುಂಬೈಗೆ ಮರಳಿದರು, ಅಲ್ಲಿ ಅವರನ್ನು ಬಜರಂಗದಳದ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಶಿಂಧೆ ಅವರು ಸುಮಾರು 13-14 ವರ್ಷಗಳ ಹಿಂದೆ ಆರ್‌ಎಸ್‌ಎಸ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ನಿಲ್ಲಿಸಿದರು, ಆದರೆ ಸದಸ್ಯರಾಗಿ ಮುಂದುವರೆದರು.

"ಆದರೆ ಇತ್ತೀಚಿನ ವರ್ಷಗಳಲ್ಲಿ ವಿಷಯಗಳು ವಿಶೇಷವಾಗಿ ಕೆಟ್ಟದಾಗಿವೆ" ಎಂದು ಅವರು ಹೇಳಿದರು. "ಅವರು ಅಧಿಕಾರದಲ್ಲಿ ಉಳಿಯಲು ದೇಶವನ್ನು ಧ್ರುವೀಕರಿಸುತ್ತಿದ್ದಾರೆ, ಆದ್ದರಿಂದ ನಾನು ಇದನ್ನು ಮಾಡಬೇಕಾಗಿದೆ ಎಂದು ನಾನು ಭಾವಿಸಿದೆ." ಎಂದು ಹೇಳಿದ್ದಾರೆ.

ಅಫಿಡವಿಟ್ ಸಲ್ಲಿಸುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಶಿಂಧೆ ಹೇಳಿದ್ದಾರೆ.

ಯಾರಾದರೂ ಏಕೆ ನಂಬಬೇಕು ಎಂದು ಕೇಳಿದಾಗ,  “ಸಂಘ ಪರಿವಾರದ ಅನೇಕ ಜನರು ನಾಯಕರ ಬಗ್ಗೆ ಅಸಮಾಧಾನ ಹೊಂದಿದ್ದಾರೆ, ಆದರೆ ಅವರು ಅದನ್ನು ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ನಾನು ಮಾತನಾಡಿದ್ದೇನೆ, ಶೀಘ್ರದಲ್ಲೇ ಸ್ಫೋಟ ಸಂಭವಿಸುವುದನ್ನು ನೀವು ನೋಡುತ್ತೀರಿ ಮತ್ತು ನಾನು ಸತ್ಯವನ್ನು ಹೇಳುತ್ತಿದ್ದೇನೆ ಎಂದು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ.” ಎಂದು ತಿಳಿಸಿದ್ದಾರೆ.

ಕೃಪೆ: Scroll.in/Arunabh Saikia

share
ವಾರ್ತಾಭಾರತಿ
ವಾರ್ತಾಭಾರತಿ
Next Story
X