ಪ್ರಧಾನಿ ಕಾರ್ಯಕ್ರಮದ ವೇಳೆ ಮನೆಯವರಿಂದ ಬೇರ್ಪಟ್ಟ ವಿದ್ಯಾರ್ಥಿನಿ; ಹೆತ್ತವರ ವಶಕ್ಕೆ ಒಪ್ಪಿಸಿದ ಪೊಲೀಸರು

ಮಂಗಳೂರು, ಸೆ.2: ನಗರ ಹೊರವಲಯದ ಬಂಗ್ರ ಕೂಳೂರಿನಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಹೆತ್ತವರಿಂದ ಬೇರ್ಪಟ್ಟ ವಿದ್ಯಾರ್ಥಿನಿಯನ್ನು ಸಂಚಾರ ಉಪವಿಭಾಗದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದ ಪೊಲೀಸರು ಮರಳಿ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.
ಕಾವೂರು ಜ್ಯೋತಿನಗರದ ನಿವಾಸಿ ಯಮನಪ್ಪ- ದೇವಕಿ ದಂಪತಿಯ ಪುತ್ರಿ ಪ್ರಜಾ ಮೇಠಿ (10) ಹೆತ್ತವರ ಜೊತೆಗೂಡಿ ಶುಕ್ರವಾರ ಪ್ರಧಾನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು.
ಕಾವೂರಿನ ವಿದ್ಯಾಜ್ಯೋತಿ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿಯಾದ ಈಕೆ ಜನಜಂಗುಳಿಯ ಮಧ್ಯೆ ಹೆತ್ತವರಿಂದ ಬೇರ್ಪಟ್ಟಿದ್ದಳು. ಪೊಲೀಸರ ಗಮನಕ್ಕೆ ಬಂದ ನಂತರ ಈಕೆಯ ಹೆತ್ತವರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬಳಿಕ ಆಕೆಯನ್ನು ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.
Next Story





