Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. IAMC,CAIR-NJ ಭೇಟಿಯ ಬಳಿಕ ʼಹಿಂದುತ್ವ...

IAMC,CAIR-NJ ಭೇಟಿಯ ಬಳಿಕ ʼಹಿಂದುತ್ವ ಬುಲ್ಡೋಝರ್‌ ರ್ಯಾಲಿಯʼ ಕುರಿತು ಅಮೆರಿಕದ ನ್ಯೂಜೆರ್ಸಿ ಸೆನೆಟರ್‌ ಗಳ ಖಂಡನೆ

ವಾರ್ತಾಭಾರತಿವಾರ್ತಾಭಾರತಿ3 Sept 2022 2:58 PM IST
share
IAMC,CAIR-NJ ಭೇಟಿಯ ಬಳಿಕ ʼಹಿಂದುತ್ವ ಬುಲ್ಡೋಝರ್‌ ರ್ಯಾಲಿಯʼ ಕುರಿತು ಅಮೆರಿಕದ ನ್ಯೂಜೆರ್ಸಿ ಸೆನೆಟರ್‌ ಗಳ ಖಂಡನೆ

ನ್ಯೂಜೆರ್ಸಿ (ಸೆಪ್ಟೆಂಬರ್ 2, 2022) - ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಬಹುತ್ವಕ್ಕೆ ಮೀಸಲಾಗಿರುವ ಯುನೈಟೆಡ್‌ ಸ್ಟೇಟ್ ಮೂಲದ ಸಂಸ್ಥೆಯಾದ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC), ಯುಎಸ್ ಸೆನೆಟರ್‌ಗಳಾದ ಬಾಬ್ ಮೆನೆಂಡೆಜ್ ಮತ್ತು ನ್ಯೂಜೆರ್ಸಿಯ ಕೋರಿ ಬುಕರ್ ಅವರ ಜಂಟಿ ಹೇಳಿಕೆಯನ್ನು ಸ್ವಾಗತಿಸಿದೆ.

IAMC, ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್-ನ್ಯೂಜೆರ್ಸಿ (CAIR-NJ), ಮತ್ತು ಅಮೇರಿಕನ್ ಮುಸ್ಲಿಮ್ಸ್ ಫಾರ್ ಡೆಮಾಕ್ರಸಿ (AMD) ಶುಕ್ರವಾರ ಎರಡು ಸೆನೆಟರ್‌ಗಳ ಕಚೇರಿಗಳನ್ನು ಭೇಟಿ ಮಾಡಿ ಪ್ರಕರಣದ ಕುರಿತು ಸಾರ್ವಜನಿಕವಾಗಿ ಖಂಡಿಸುವಂತೆ ಒತ್ತಾಯಿಸಿದ ನಂತರ ಸೆನೆಟರ್‌ಗಳಾದ ಮೆನೆಂಡೆಜ್ ಮತ್ತು ಬುಕರ್‌ರಿಂದ ಟೀಕೆಗಳು ಬಂದಿವೆ. ಆಗಸ್ಟ್ 14 ರಂದು ಅಮೆರಿಕದಲ್ಲಿ ನಡೆದಿದ್ದ ಮೆರವಣಿಗೆಯಲ್ಲಿ ಬುಲ್ಡೋಝರ್ ಪ್ರದರ್ಶನ ಮಾಡಲಾಗಿತ್ತು.‌ ಈ ಪ್ರಕರಣದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

"ಕಳೆದ ತಿಂಗಳು ಎಡಿಸನ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಬುಲ್ಡೋಜರ್ ಅನ್ನು ಪ್ರದರ್ಶನ ಮಾಡಿದ್ದರಿಂದ ಆಕ್ರೋಶಗೊಂಡಿರುವ ನ್ಯೂಜೆರ್ಸಿಯ ದಕ್ಷಿಣ ಏಷ್ಯಾದ ಸಮುದಾಯದ ನಾಯಕರು ಮತ್ತು ಸದಸ್ಯರನ್ನು ಈ ವಾರ ನಮ್ಮ ಕಚೇರಿಯ ಪ್ರತಿನಿಧಿಗಳು ಭೇಟಿಯಾಗಿದ್ದಾರೆ" ಎಂದು US ಸೆನೆಟರ್‌ಗಳಾದ ಮೆನೆಂಡೆಜ್ ಮತ್ತು ಬೂಕರ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. "ಬುಲ್ಡೋಝರ್ ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಬೆದರಿಕೆಯ ಸಂಕೇತವಾಗಿದೆ ಮತ್ತು ಈ ಮೆರವಣಿಗೆಯಲ್ಲಿ ಅದನ್ನು ಸೇರಿಸುವುದು ತಪ್ಪಾಗಿದೆ." ಎಂದೂ ಅವರು ಹೇಳಿದ್ದಾಎ

ತಮ್ಮ ಹೇಳಿಕೆಯಲ್ಲಿ, ಯುಎಸ್ ಸೆನೆಟರ್‌ಗಳು "ನ್ಯೂಜೆರ್ಸಿಯು, ದಕ್ಷಿಣ ಏಷ್ಯಾದ ಅತಿದೊಡ್ಡ ಸಮುದಾಯಗಳಲ್ಲೊಂದು ಒಳಗೊಂಡಂತೆ ರಾಷ್ಟ್ರದ ಹಲವು ವೈವಿಧ್ಯಮಯ ಸಮುದಾಯಗಳಿಗೆ ಹೆಮ್ಮೆಯ ನೆಲೆಯಾಗಿದೆ ಮತ್ತು ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳು ಇಲ್ಲಿ ಬೆದರಿಕೆಯಿ ಅಥವಾ ಭಯವಿಲ್ಲದೇ ಬದುಕುವ ಹಕ್ಕನ್ನು ಹೊಂದಿವೆ." ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ IAMC ಮುಖಂಡ ಮಿನ್ಹಾಜ್ ಖಾನ್, “ನಾವು ಸೆನೆಟರ್‌ಗಳಾದ ಮೆನೆಂಡೆಜ್ ಮತ್ತು ಬೂಕರ್‌ ರ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ ಮತ್ತು ಭಾರತದಲ್ಲಿ ಹಿಂದುತ್ವ ಸರ್ಕಾರಗಳು ಮುಸ್ಲಿಂ ಸಮುದಾಯವನ್ನು ಬೆದರಿಸಲು ಬುಲ್ಡೋಝರ್ ಅನ್ನು ಬಳಸುತ್ತಿವೆ ಎಂದು ತಿಳಿಸಿದ್ದೇವೆ. ಅವರ ಮನೆಗಳು, ವ್ಯವಹಾರ ಸ್ಥಳಗಳು ಮತ್ತು ಮಸೀದಿಗಳನ್ನು ಪ್ರತೀಕಾರ ಮತ್ತು ಇಸ್ಲಾಮೋಫೋಬಿಯಾದಿಂದ ಕೆಡವಲಾಯಿತು ಎಂದು ಮಾಹಿತಿ ನೀಡಿದ್ದೇವೆ. ಸೆನೆಟರ್‌ಗಳಾದ ಮೆನೆಂಡೆಜ್ ಮತ್ತು ಬುಕರ್ ಅವರು ಆ ಮೆರವಣಿಗೆಯಲ್ಲಿ ಅಳವಡಿಸಲಾದ ದ್ವೇಷವನ್ನು ಗುರುತಿಸಿರುವುದು ನಮಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.

ಪರೇಡ್ ಅನ್ನು IBA ಸಂಘಟನೆಯು ಆಯೋಜಿಸಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರರಾದ ಸಂಬಿತ್ ಪಾತ್ರ ಭಾಗವಹಿಸಿದ್ದರು. ಅವರು ಭಾರತದ ದೈನಂದಿನ ಪ್ರೈಮ್-ಟೈಮ್ ಶೋಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷವನ್ನು ಹರಡುವ ಕುರಿತು ಹೆಸರುವಾಸಿಯಾಗಿದ್ದಾರೆ. ಅವರು ಪರೇಡ್‌ನ ಗ್ರ್ಯಾಂಡ್ ಮಾರ್ಷಲ್ ಆಗಿದ್ದರು. ಇದರ ಜೊತೆಗೆ, ಬಿಜೆಪಿ ನಾಯಕರ ಸ್ನೇಹಿತರಾಗಿ ಗುರುತಿಸಿಕೊಂಡವರು ಸಹ ಪರೇಡ್‌ನಲ್ಲಿ ಉಪಸ್ಥಿತರಿದ್ದರು. ಇದು ಭಾರತದ ಹಿಂದುತ್ವವಾದಿಗಳೊಂದಿಗೆ IBA ಸಂಘಟನೆಗಿರುವ ಸಂಪರ್ಕವನ್ನು ದೃಢಪಡಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚಿತ್ರಗಳೊಂದಿಗೆ ಬುಲ್ಡೋಝರ್‌ ಕೂಡಾ ಇತ್ತು.

ಈ ದ್ವೇಷ ಹರಡುವ ಮೆರವಣಿಗೆಯನ್ನು ಈಗಾಗಲೇ ಹಲವಾರು ಅಧಿಕಾರಿಗಳು ಮತ್ತು ಸಂಘಟನೆಗಳು ಖಂಡಿಸಿವೆ. US ಪ್ರತಿನಿಧಿ ಬೋನಿ ವ್ಯಾಟ್ಸನ್ ಕೋಲ್ಮನ್ (NJ); ನ್ಯೂಜೆರ್ಸಿ ಅಸೆಂಬ್ಲಿಮ್ಯಾನ್ ರಾಜ್ ಮುಖರ್ಜಿ (ಅಧ್ಯಕ್ಷ, ಜಂಟಿ ಏಷ್ಯನ್ ಪೆಸಿಫಿಕ್ ಅಮೇರಿಕನ್ ಕಾಕಸ್); ನ್ಯೂಜೆರ್ಸಿ ಸೆನ್. ವಿನ್ ಗೋಪಾಲ್ (ಉಪಾಧ್ಯಕ್ಷ, ಜಂಟಿ ಏಷ್ಯನ್ ಪೆಸಿಫಿಕ್ ಅಮೇರಿಕನ್ ಕಾಕಸ್); ನ್ಯೂಜೆರ್ಸಿ ಅಸೆಂಬ್ಲಿ ಸದಸ್ಯೆಯರಾದ ಶಮಾ ಹೈದರ್, ಸದಾಫ್ ಜಾಫರ್ ಮತ್ತು ಎಲೆನ್ ಪಾರ್ಕ್, ಎಡಿಸನ್ ಮೇಯರ್ ಸ್ಯಾಮ್ ಜೋಶಿ, ವುಡ್‌ಬ್ರಿಡ್ಜ್ ಮೇಯರ್ ಜಾನ್ ಮೆಕ್‌ಮೊರ್ಕಾಕ್, ಎಡಿಸನ್ ಕೌನ್ಸಿಲ್ ಅಧ್ಯಕ್ಷ ಜೋಸೆಫ್ ಕೊಯ್ಲ್, ಎಡಿಸನ್ ಕೌನ್ಸಿಲ್ ಉಪಾಧ್ಯಕ್ಷ ಜಾಯ್ಸ್ ಶಿಪ್-ಫ್ರೀಮನ್, ಎಡಿಸನ್ ಕೌನ್ಸಿಲ್ ವುಮನ್ ಮಾರ್ಗಾಟ್ ಹ್ಯಾರಿಸ್, ಎಡಿಸನ್ ಕೌನ್ಸಿಲ್‌ಮೆನ್ ಜಾನ್ ಪೋಯ್ನರ್, ರಿಚರ್ಡ್ ಬ್ರೆಶರ್ ಮತ್ತು ನಿಶಿತ್ ಪಟೇಲ್, National Alliance for the Advancement of the Colored People (NAACP), Black Lives Matter, American Muslims for Democracy, Hindus for Human Rights, Council on American Islamic Relations (CAIR)ಹಾಗೂ Indian American Muslim Council ಖಂಡಿಸಿವೆ.

IBA ಮತ್ತು OFBJP ಸಂಘಟನೆಗಳು ಭಾರತದ ಹಿಂದುತ್ವವಾದಿಗಳೊಂದಿಗೆ ಹೊಂದಿರುವ ಸಂಪರ್ಕಗಳು ಮತ್ತು ಅಮೆರಿಕದಲ್ಲಿ ದ್ವೇಷ ಭಾಷಣ ಮತ್ತು ಅಪರಾಧಗಳಲ್ಲಿ ಭಾಗಿಯಾಗಿರುವ ಕುರಿತು ತನಿಖೆ ನಡೆಸುವಂತೆ IAMC ಅಮೆರಿಕದ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X