BBMP ಮಾರ್ಷಲ್ಸ್ ಮೇಲೆ ಹಲ್ಲೆ; ಆರೋಪ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.3: ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ದನ್ನು ಪ್ರಶ್ನಿಸಿದ ಬಿಬಿಎಂಪಿ ಮಾರ್ಷಲ್ಸ್ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರ್ಷಲ್ಗಳಾದ ವಿದ್ಯಾ ಹಾಗೂ ಸುರೇಂದ್ರ ನಾಯಕ್ ಸೆ.1ರ ಬೆಳಗ್ಗೆ ಹೆಗ್ಗನಹಳ್ಳಿ ಕ್ರಾಸ್ ಸಮೀಪದ ನೀಲಗಿರಿ ತೋಪಿನ ಬಳಿ ಕಸ ಹಾಕುತ್ತಿದ್ದವರಿಗೆ ದಂಡ ವಿಧಿಸಿ ತಿಳುವಳಿಕೆ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಆಟೊದಲ್ಲಿ ಬಂದಿದ್ದ ಮೂವರು ಅಪರಿಚಿತರು ಕಸ ಎಸೆದಿದ್ದಾರೆ ಎನ್ನಲಾಗಿದೆ.
ಮಾರ್ಷಲ್ಸ್ ಎಲ್ಲರಂತೆ ಅವರನ್ನೂ ಸಹ ತಡೆದು ದಂಡ ವಿಧಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಂದ್ರ ನಾಯಕ್ ಕಾಲಿನ ಮೇಲೆ ಆಟೊ ಹತ್ತಿಸಿ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





