ಜ.30-ಫೆ.4ರವರೆಗೆ ಎಣ್ಮೂರು ಮಖಾಂ ಉರೂಸ್
ಉರೂಸ್ ಸಮಿತಿಯ ಅಧ್ಯಕ್ಷರಾಗಿ ಮುಸ್ತಫ ಸಅದಿ, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಕುಂಞಿ ಆಯ್ಕೆ

ಮುಸ್ತಫ ಸಅದಿ, ಮುಹಮ್ಮದ್ ಕುಂಞಿ, ಸುಲೈಮಾನ್ ಮುಸ್ಲಿಯಾರ್
ಸುಳ್ಯ, ಸೆ.3: ಇತಿಹಾಸ ಪ್ರಸಿದ್ಧ ಎಣ್ಮೂರು-ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮಾ ಮಸೀದಿ ವತಿಯಿಂದ ವಲಿಯುಲ್ಲಾಹಿ ಮಶ್ಹೂರತ್ ಬೀವಿ(ರ.ಅ.)ರವರ ಹೆಸರಿನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಎಣ್ಮೂರು ಮಖಾಂ ಉರೂಸ್ ಹಾಗೂ ಮತಪ್ರವಚನ ಕಾರ್ಯಕ್ರಮವು 2023ರ ಜನವರಿ 30ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ ಎಂದು ಇತ್ತೀಚೆಗೆ ನಡೆದ ಜಮಾಅತ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಿದೆ.
ಜಮಾಅತ್ ಸಮಿತಿಯ ಅಧ್ಯಕ್ಷರಾದ ಸುಲೈಮಾನ್ ಟಿ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಸೀದಿಯ ಖತೀಬ್ ಅಬ್ದುಲ್ಲಾ ಮದನಿ ದುಆ ಮಾಡಿದರು.
ನೂತನ ಉರೂಸ್ ಸಮಿತಿಯ ಅಧ್ಯಕ್ಷರಾಗಿ ಮುಸ್ತಫಾ ಸಅದಿ ಕೊಳ್ತಂಗರೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಕುಂಞಿ ಕೊಳ್ತಂಗರೆ, ಕೋಶಾಧಿಕಾರಿಯಾಗಿ ಕೆ.ಸಿ.ಸುಲೈಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ದಾವೂದ್ ಮುಚ್ಚಿಲ, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ಮುಚ್ಚಿಲ, ಅಝೀಝ್ ನೇಮನಕಜೆ ಅವರನ್ನು ಆಯ್ಕೆ ಮಾಡಲಾಯಿತು.
ಜಮಾಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಮರಕ್ಕಡ ಸ್ವಾಗತಿಸಿದರು. ಉಪಾಧ್ಯಕ್ಷ ರಫೀಕ್ ಸಿ.ಎಂ. ವಂದಿಸಿದರು.







