ಮಂಗಳೂರು; ಫ್ಲ್ಯಾಟ್ ನೀಡದೆ ವಂಚನೆ ಆರೋಪ: ಪ್ರಕರಣ ದಾಖಲು

ಮಂಗಳೂರು, ಸೆ.3: ಫ್ಲ್ಯಾಟ್ ನೀಡುವುದಾಗಿ ಹೇಳಿ ಹಣ ಪಡೆದ ಬಳಿಕ ಫ್ಲ್ಯಾಟ್ ನೀಡದೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಪರಿಚಯದ ಜಾನ್ ಸಿಲ್ವೆಸ್ಟರ್ ಸಲ್ದಾನ ಮತ್ತು ಜೀನ್ ರೂಪಾ ಸಲ್ದಾನ ಅವರ ಪಾಲುದಾರಿಕೆಯ ಸಂಸ್ಥೆಯ ಹೊಸ ವಸತಿ ಸಮುಚ್ಚಯದ ಎರಡನೇ ಮಹಡಿಯ ಫ್ಲ್ಯಾಟ್ ಖರೀದಿಗಾಗಿ 35 ಲ.ರೂ.ಗಳಿಗೆ ಕರಾರು ಪತ್ರ ಮಾಡಿಕೊಂಡು 2015ರ ಎಪ್ರಿಲ್‌ನಲ್ಲಿ 10 ಲ.ರೂ. ಮುಂಗಡವಾಗಿ ನೀಡಿರುವುದಾಗಿ ಆ್ಯಂಟೊನಿ ಡಿಸೋಜಾ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಹಂತ ಹಂತವಾಗಿ ಒಪ್ಪಂದದಂತೆ ಪೂರ್ತಿ ಹಣ ನೀಡಿದ್ದೆ. ಆದರೆ ಜಾನ್ ಸಿಲ್ವೆಸ್ಟರ್ ಸಲ್ದಾನ, ಜೀನ್ ರೂಪಾ ಸಲ್ದಾನ, ಜಾಗದ ಮಾಲಕರಾದ ಅನಿಲ್ ವೇಗಸ್ ಮತ್ತು ಮಾವೀಸ್ ಜೆ.ವೇಗಸ್ ತನಗೆ ಫ್ಲ್ಯಾಟ್ ನೀಡದೆ, ಮಾಹಿತಿಯನ್ನು ಕೂಡ ನೀಡದೆ ಕೋ-ಆಪರೇಟಿವ್ ಬ್ಯಾಂಕ್‌ವೊಂದರಲ್ಲಿ 2 ಕೋ.ರೂ.ಗಳಿಗೆ ಅಡಮಾನವಿರಿಸಿ ವಂಚಿಸಿದ್ದಾರೆ ಎಂದು ಆ್ಯಂಟೊನಿ ಡಿಸೋಜಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
Next Story





