ಪ್ರೊ. ರಾಧಾಕೃಷ್ಣ ಆಚಾರ್ಯರಿಗೆ ನುಡಿನಮನ

ಉಡುಪಿ, ಸೆ.3: ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ ಬಳಿಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ, ’ಕಸ್ತೂರಿ’ ಮಾಸ ಪತ್ರಿಕೆಯ ಸಂಪಾದಕರಾಗಿ ಶ್ರೇಷ್ಠ ಲೇಖಕರೆನ್ನಿಸಿದ ಪಾ.ವೆಂ.ಆಚಾರ್ಯರ ಪುತ್ರ ಪ್ರೊ.ರಾಧಾಕೃಷ್ಣ ಆಚಾರ್ಯ ಬುಧವಾರ ನಿಧನರಾಗಿದ್ದು, ಈ ಸಂಬಂಧ ನುಡಿನಮನ ಕಾರ್ಯಕ್ರಮ ಅಂಬಲಪಾಡಿ ಕಿದಿಯೂರು ವಿದ್ಯಾಸಮುದ್ರ ಶಾಲೆಯಲ್ಲಿ ಇಂದು ನಡೆಯಿತು.
ಪ್ರೊ.ಆಚಾರ್ಯರು ಅರ್ಥಶಾಸ್ತ್ರದ ಶ್ರೇಷ್ಟ ಉಪನ್ಯಾಸಕರಾಗಿ, ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿ, ಕಿದಿಯೂರು ವಿದ್ಯಾಸಂಸ್ಥೆಗಳ ಸಂಚಾಲಕರಾಗಿ, ಅದಮಾರು ಶಿಕ್ಷಣ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸಲ್ಲಿಸಿದ ನಿಸ್ಪೃಹ ಸೇವೆಯನ್ನು ಸ್ಮರಿಸಲಾಯಿತು.
ಸಭೆಯಲ್ಲಿ ಕೃಷ್ಣಮೂರ್ತಿ ರಾವ್, ಪ್ರೊ.ಶ್ರೀಶ ಆಚಾರ್ಯ, ಬಿ.ಜಿ.ರಾವ್, ಪ್ರೊ.ಕೆ. ಸದಾಶಿವ ರಾವ್, ಡಾ. ಬಿ. ಜಗದೀಶ್ ಶೆಟ್ಟಿ, ಎ. ರಾಘವೇಂದ್ರ ರಾವ್, ಎ.ರಾಘವೇಂದ್ರ ಉಪಾಧ್ಯಾಯ, ಶ್ಯಾಮಲಾಪ್ರಸಾದ್, ಮೀರಾ ಭಟ್, ರಾಮಚಂದ್ರ ಉಪಾಧ್ಯ, ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ, ಡಾ. ಮೋಹನ್‌ದಾಸ್, ಎಚ್.ಜಗದೀಶ್ ಕೆದ್ಲಾಯ ಪ್ರೊ. ರಾಧಾಕೃಷ್ಣ ಆಚಾರ್ಯರ ಕುರಿತು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ವಿದುಷಿ ವಾರಿಜಾಕ್ಷಿ ಆರ್.ಎಲ್.ಭಟ್ ರಿಂದ ಶಾಂತಿ ಪ್ರಾರ್ಥನೆ ಜರಗಿತು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ಕೆ.ಅಜಿತ್‌ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.







