ಮಂಗಳೂರು; ಪೊಲೀಸ್ ಇಲಾಖೆಯ ಶ್ವಾನ ಸಾವು

ಮಂಗಳೂರು, ಸೆ. 3: ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಶನಿವಾರ ಸಾವಿಗೀಡಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು.
ಮಂಗಳೂರಿಗೆ ಅತೀ ಗಣ್ಯರು ಭೇಟಿಯ ಸಂದರ್ಭ ಮತ್ತು ಇತರ ಬಂದೋಬಸ್ತ್ ವೇಳೆ ಸ್ಫೋಟಕ ಪತ್ತೆ ಹಚ್ಚುವ ಕರ್ತವ್ಯದಲ್ಲಿ ತೊಡಗಿಸಿಕೊಂಡಿತ್ತು. ಶನಿವಾರ ಈ ಶ್ವಾನ ಸಾವಿಗೀಡಾಗಿದೆ.
Next Story





