ತಲಪಾಡಿ-ಕೆ.ಸಿ.ರೋಡ್: ಫಲಾಹ್ ಕಾಲೇಜಿನಲ್ಲಿ ಸಂಭ್ರಮವೋತ್ಸವ

ಮಂಗಳೂರು, ಸೆ.3: ಕಳೆದ (2021-22) ಶೈಕ್ಷಣಿಕ ಸಾಲಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸತತ 5ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದ ತಲಪಾಡಿ ಕೆ.ಸಿ ರೋಡ್ ವಿದ್ಯಾನಗರದ ಫಲಾಹ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸಂಭ್ರಮವೋತ್ಸವ ನಡೆಯಿತು.
ಫಲಾಹ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಾಜಿ ಯು.ಬಿ.ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಮತ್ತು ಸೊಸೈಟಿಯ ಸದಸ್ಯ ಟಿ. ಇಸ್ಮಾಯಿಲ್ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಫಲಾಹ್ ಎಜುಕೇಶನ್ ಸೊಸೈಟಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೆ ಶೈಕ್ಷಣಿಕ ವರ್ಷದ ಕಾಲೇಜು ಸಂಸತ್ ಪ್ರಮಾಣವಚನ ಹಾಗೂ 100 ಗಂಟೆಗಳ ಸ್ಪೋಕನ್ ಇಂಗ್ಲೀಷ್ ಕೋರ್ಸ್, ಕಾಲೇಜು ಚಟುವಟಿಕೆಗಳ ವಿವಿಧ ಸಂಘಗಳ ಉದ್ಘಾಟನೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಾತಿಮತುಲ್ ತಂಶೀರಾ ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕಾರ್ಯದರ್ಶಿ ಹಾಜಿ ಎನ್. ಅರಬಿಕುಂಞಿ, ಕೋಶಾಧಿಕಾರಿ ಹಾಜಿ ಕೆ.ಎಂ ಅಬ್ಬಾಸ್ ಮಜಲ್, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಮುಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಆಯಿಶಾ ಸಬೀನಾ ಕೈಸಿರಾನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ವಿ.ಡಿಸೋಜ, ಕಾಲೇಜಿನ ನಾಯಕಿ ಶಿಲ್ಪಾಮತ್ತು ಉಪನಾಯಕಿ ಹಲೀಮತ್ ಶೈಬಾ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಶ್ವೇತಾ ರಾಜೇಶ್, ಆಶಾ ಮತ್ತು ಆಫೀಫಾ ಪರ್ವೀನ್ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಸೈಬುನ್ನೀಸಾ ಸ್ವಾಗತಿಸಿದರು. ಶಿಲ್ಪಾವಂದಿಸಿದರು. ಹಫಾ ಕಾರ್ಯಕ್ರಮ ನಿರೂಪಿಸಿದರು.







