ಹ್ಯಾಂಡ್‌ಬಾಲ್ ತಂಡಕ್ಕೆ ಸುವಿನ್ ಆಯ್ಕೆ

ಮಂಗಳೂರು, ಸೆ.3: ಕರ್ನಾಟಕ ಹ್ಯಾಂಡ್‌ಬಾಲ್ ತಂಡದಿಂದ ೫೧ನೇ ರಾಷ್ಟ್ರೀಯ ಹಿರಿಯರ ಹ್ಯಾಂಡ್‌ಬಾಲ್ ತಂಡಕ್ಕೆ ದ.ಕ. ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಶನ್ (ರಿ) ಇದರ ಸದಸ್ಯ ಸುವಿನ್ ವಿ.ಕೆ. ಆಯ್ಕೆಯಾಗಿದ್ದಾರೆ.
ನಗರದ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಯಾಗಿರುವ ಸುವಿನ್ ಅವರು ವಿನಯ ಕುಮಾರ್ ಎ. ಮತ್ತು ಸುಷ್ಮಾ ವಿನಯ ದಂಪತಿಯ ಪುತ್ರ.
51ನೇ ರಾಷ್ಟ್ರೀಯ ಹಿರಿಯರ ಹ್ಯಾಂಡ್‌ಬಾಲ್ ಪಂದ್ಯಾಟವು ಸೆ.9ರಿಂದ 12ರವರೆಗೆ ಲಕ್ನೋದಲ್ಲಿ ಜರಗಲಿದೆ ಎಂದು ಅಸೋಸಿಯೇಶನ್‌ನ ಕಾರ್ಯದರ್ಶಿ ಕೆ. ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.
Next Story





