2೦೦ ಕೋ.ರೂ. ವಂಚನೆ ಪ್ರಕರಣ : ಮತ್ತೆ ನಟಿ ನೋರಾ ಫತೇಹಿ ವಿಚಾರಣೆ

ಹೊಸದಿಲ್ಲಿ, ಸೆ. ೩: ಸುಖೇಶ್ ಚಂದ್ರಶೇಖರ್ ಮುಖ್ಯ ಆರೋಪಿಯಾಗಿರುವ ೨೦೦ ಕೋ.ರೂ. ಹಣ ಅಕ್ರಮ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ದಳ ಶುಕ್ರವಾರ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಫತೇಹಿ ಹಾಗೂ ಇನ್ನೋರ್ವ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸೇರಿದಂತೆ ನಾಲ್ಕರಿಂದ ಐದು ಮಂದಿಗೆ ಸಮನ್ಸ್ ನೀಡಲಾಗಿತ್ತು ಎಂದು ವಿಶೇಷ ಪೊಲೀಸ್ ಆಯುಕ್ತ (ಅಪರಾಧ ಹಾಗೂ ಆರ್ಥಿಕ ಅಪರಾಧ ದಳ) ರವೀಂದ್ರ ಯಾದವ್ ಸಿಂಗ್ ಅವರು ಹೇಳಿದ್ದಾರೆ.
ಶುಕ್ರವಾರ ನಡೆದ ವಿಚಾರಣೆ ಸಂದರ್ಭ ಫತೇಹಿ ಅವರು ಸಹಕರಿಸಿದ್ದಾರೆ. ಸುಖೇಶ್ ಚಂದ್ರಶೇಖರ್ ನೀಡಿದ ಕೊಡುಗೆಯ ಬಗ್ಗೆ ಅವರನ್ನು ವಿಚಾರಣೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆದರೆ, ಇನ್ನೂ ಕೆಲವು ಉತ್ತರ ಸಿಗದ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ ಎಂದು ಸಿಂಗ್ ತಿಳಿಸಿದ್ದಾರೆ.
Next Story





