ಸಾಲ್ಮರ ಸೈಯದ್ ಮಲೆ ಮಸೀದಿಯಲ್ಲಿ ಮುಅಲ್ಲಿಮ್ ಡೇ ಆಚರಣೆ

ಪುತ್ತೂರು: ಗುರುಗಳು ಕಲಿಸಿದ ವಿದ್ಯೆ ಹಾಗೂ ಮಾರ್ಗದರ್ಶನದಿಂದ ಇಹಪರದ ವಿಜಯ ಸಾಧ್ಯ ಎಂದು ಸೈಯದ್ ಮಲೆ ಜುಮಾ ಮಸೀದಿ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹೇಳಿದರು.
ಅವರು ಸಾಲ್ಮರ ಮಸೀದಿಯ ಮಿಸ್ ಬಾಹುಲ್ ಹುದಾ ಮದರಸ ಸಭಾಂಗಣದಲ್ಲಿ ರವಿವಾರ ನಡೆದ 'ಮುಅಲ್ಲಿಂ ಡೇ' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಸ್ತದ' ಧ್ವಜ ಆರಿಸುವ ಮೂಲಕ ಸಯ್ಯಿದ್ ಮುಹಮ್ಮದ್ ತಂಙಳ್ ಸಾಲ್ಮರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಯ್ಯಿದ್ ಅವರ ನೇತೃತ್ವದಲ್ಲಿ ಕೂಟ್ ಝಿಯಾರತ್ ನಡೆಸಲಾಯಿತು. ಸ್ಥಳೀಯ ಖತೀಬ್ ಪಿ ಯಂ ಉಮರ್ ದಾರಿಮಿ ಸಾಲ್ಮರ ಉದ್ಘಾಟಿಸಿದರು.
ಸಹಾಯಕ ಖತೀಬ್ ಅನ್ಸಾರುದ್ದೀನ್ ಕೌಸರಿ, ಅಧ್ಯಾಫಕರಾದ ಅಬ್ದುರ್ರ ಝಾಕ್ ಮುಸ್ಲಿಯಾರ್, ಅಯ್ಯೂಬ್ ಮುಸ್ಲಿಯಾರ್, ಕಾರ್ಯದರ್ಶಿ ಹಸನ್ ಇನ್ನಿತರ ಜಮಾಅತ್ ನೇತಾರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಪಿ ಯಂ ಎ ಬಶೀರ್ ದಾರಿಮಿ ಮಾಡಾವು ಸ್ವಾಗತಿಸಿದರು.
Next Story





