ವ್ಯವಹಾರದಲ್ಲಿ ಸಾಲ: ಯುವಕ ಆತ್ಮಹತ್ಯೆ

ಶಂಕರನಾರಾಯಣ: ವ್ಯವಹಾರದಲ್ಲಿನ ಸಾಲ ಹಾಗೂ ಅನಾರೋಗ್ಯ ದಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಹಾಲಾಡಿಯಲ್ಲಿ ನಡೆದಿದೆ.
ಮೃತರನ್ನು ತೀರ್ಥಹಳ್ಳಿ ಬಳಗೋಡು ಗ್ರಾಮದ ಮಧುಕರ ಕೆ.ಬಿ.(31) ಎಂದು ಗುರುತಿಸಲಾಗಿದೆ. ಇವರು ಚಾಲಕ ವೃತ್ತಿ ಮತ್ತು ಸೈಬರ್ ಸೆಂಟರ್ ನಡೆಸುತ್ತಿದ್ದರು. ವ್ಯವಹಾರದ ಬಗ್ಗೆ ಸಾಲ ಮಾಡಿ ಕೊಂಡಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು, ಸೆ.2ರಂದು ಇಲಿ ಪಾಶಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಸೆ.3ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





