ಕಾರು ಢಿಕ್ಕಿ: ಪಾದಚಾರಿ ಮೃತ್ಯು

ಮಣಿಪಾಲ, ಸೆ.4: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.3ರಂದು ಬೆಳಗ್ಗೆ ಪೆರಂಪಳ್ಳಿಯ ರಕ್ತೇಶ್ವರಿ ಜ್ಯೊತಿಷ್ಯಾಲಯದ ಎದುರುಗಡೆ ನಡೆದಿದೆ.
ಮೃತರನ್ನು ಪೆರಂಪಳ್ಳಿ, ವಿನೋದ್ ಎಂದು ಗುರುತಿಸಲಾಗಿದೆ. ಪೆರಂಪಳ್ಳಿ ಶಂಕರಾನಂದ ಆಶ್ರಮ ಕಡೆಯಿಂದ ಪೆರಂಪಳ್ಳಿ ಚರ್ಚ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇವರಿಗೆ, ಪೆರಂಪಳ್ಳಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡಿಯಿತ್ತೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿನೋದ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





