ಏಶ್ಯಕಪ್ ಸೂಪರ್-4 ಪಂದ್ಯ: ಪಾಕಿಸ್ತಾನಕ್ಕೆ 182 ರನ್ ಗುರಿ ನೀಡಿದ ಭಾರತ
ವಿರಾಟ್ ಕೊಹ್ಲಿ ಅರ್ಧಶತಕ

Photo : BCCI
ದುಬೈ, ಸೆ.4: ಮಾಜಿ ನಾಯಕ ವಿರಾಟ್ ಕೊಹ್ಲಿ (virat kohli) ಅರ್ಧಶತಕ(60 ರನ್, 44 ಎಸೆತ, 4 ಬೌಂಡರಿ, 1 ಸಿಕ್ಸರ್)ಕೊಡುಗೆಯ ನೆರವಿನಿಂದ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಏಶ್ಯಕಪ್ (asia cup) ಸೂಪರ್ -4 ಪಂದ್ಯದ ಗೆಲುವಿಗೆ 182 ರನ್ ಗುರಿ ನೀಡಿದೆ.
ದುಬೈ ಇಂಟರ್ ನ್ಯಾಶನಲ್ ಕ್ರೀಡಾಂಗಣದಲ್ಲಿ ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181ರನ್ ಗಳಿಸಿದೆ.
18ನೇ ಓವರ್ ನಲ್ಲಿ ಮುಹಮ್ಮದ್ ಹಸನೈನ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ 36 ಎಸೆತಗಳಲ್ಲಿ 50 ರನ್ ಪೂರೈಸಿದರು.
ಇನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್(28 ರನ್,20 ಎಸೆತ)ಹಾಗೂ ರೋಹಿತ್ ಶರ್ಮಾ(28 ರನ್, 16 ಎಸೆತ) ಮೊದಲ ವಿಕೆಟಿಗೆ 54 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಕೊಹ್ಲಿ ಅವರು ರಿಷಭ್ ಪಂತ್ ರೊಂದಿಗೆ 4ನೇ ವಿಕೆಟಿಗೆ 35 ರನ್ ಹಾಗೂ ದೀಪಕ್ ಹೂಡಾ(16 ರನ್) ಅವರೊಂದಿಗೆ ಆರನೇ ವಿಕೆಟಿಗೆ 37 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಪಾಕಿಸ್ತಾನದ ಪರ ಸ್ಪಿನ್ನರ್ ಶಾದಾಬ್ ಖಾನ್(2-31)ಯಶಸ್ವಿ ಬೌಲರ್ ಎನಿಸಿಕೊಂಡರು. ನಸೀಮ್ ಶಾ(1-45), ಮುಹಮ್ಮದ್ ಹಸನೈನ್(1-38), ರವೂಫ್(1-38) ಹಾಗೂ ಮುಹಮ್ಮದ್ ನವಾಝ್(1-25)ತಲಾ ಒಂದು ವಿಕೆಟ್ ಪಡೆದರು.