ಧರ್ಮಸ್ಥಳ | ಯುವಕ ನಾಪತ್ತೆ: ಪೊಲೀಸರಿಂದ ಲುಕ್ ಔಟ್ ನೋಟಿಸ್

ಬೆಳ್ತಂಗಡಿ, ಸೆ.5: ಯುವಕನೊಬ್ಬ ನಾಪತ್ತೆಯಾಗಿರುವ (Missing) ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಧರ್ಮಸ್ಥಳ ಪೊಲೀಸರಿಗೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಕೋರಿ ಪೊಲೀಸರು ಪ್ರಕಟನೆ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ನೇರೊಳ್ ಪಲ್ಕೆ ಮನೆ ನಿವಾಸಿ ಮುರಳಿಧರ್ ಎಂಬವರ ಪುತ್ರ, 21 ವರ್ಷದ ಕೌಶಿಕ್ ಕೆ. ಕಳೆದ ವಾರ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ. ಇದರಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಕೌಶಿಕ್ ಮಂಗಳೂರಿನ ಕೆಪಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮನೆಯಿಂದ ಮಂಗಳೂರಿನ ಕೆ.ಪಿ.ಟಿ ಕಾಲೇಜಿಗೆ ಹೋಗಿ ಬರುತ್ತಿದ್ದ.
ಕೌಶಿಕ್ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಲುಕ್ ಔಟ್ ನೋಟಿಸ್ ಪ್ರಕಟನೆ ಹೊರಡಿಸಿದ್ದಾರೆ.
Next Story