ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಉಡುಪಿ, ಸೆ.5: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನವನ್ನು ಸೋಮವಾರ ಆಚರಿಸಲಾಯಿತು.
ಹೂಡೆ ಪರಿಸರದ ನಿವೃತ್ತ ಶಿಕ್ಷಕರಾದ ಹಂಗಾರಕಟ್ಟೆ ಹಾಜಿ ಮಾಸ್ಟರ್, ಜಲಾಶಿ ಡಿಸೋಜ, ಜಿ.ದಮಯಂತಿ ಅವರನ್ನು ಸನ್ಮಾನಿಸಲಾಯಿತು. ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 23ಕ್ಕೂ ಅಧಿಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಲ್ಕಿಸ್ ಬಾನು ಹಾಗೂ ಪೂರ್ಣಿಮಾ ರಾವ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆದಿಉಡುಪಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಹಂಗಾರಕಟ್ಟೆ ಹಾಜಿ ಮಾಸ್ಟರ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಮುಕ್ತ ಮನಸ್ಸಿನಿಂದ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡು ವುದರೊಂದಿಗೆ ಸಮಾಜಘಾತುಕ ಕೃತ್ಯಗಳಿಂದ ದೂರವಿರುಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಹಿಸಿದ್ದರು. ಶಿಕ್ಷಕಿಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಯಿತು. ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಾಹನವಾಜ್, ಟ್ರಸ್ಟಿಗಳಾದ ಮೌಲಾನ ಆದಮ್ ಸಾಹೇಬ್, ಹುಸೇನ್ ಮಾಸ್ಟರ್, ಆಡಳಿತ ಅಧಿಕಾರಿ ಅಸ್ಲಂ ಹೈಕಾಡಿ, ಮುಖ್ಯ ಶಿಕ್ಷಕಿಯರಾದ ಶಾದತ್, ಸುನಂದ, ತಸ್ಮೀಯ, ಪಿಯು ಪ್ರಾಂಶುಪಾಲೆ ದಿವ್ಯ ಪೈ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಶಬೀನಾ ,ಅರಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬುಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಸಾಲಿಹಾತ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾನಿ ತಸ್ಮೀಯ ಸ್ವಾಗತಿಸಿ ದರು. ಮೌಲಾನ ಶಾಹಿದ್ ಪ್ರಾರ್ಥನೆಗೈದರು. ಸಹ ಶಿಕ್ಷಕಿ ಜ್ಯೋತಿ ವಂದಿಸಿ ದರು. ಸಹ ಶಿಕ್ಷಕಿ ಲವೀನಾ ಕ್ಲಾರ ಕಾರ್ಯಕ್ರಮ ನಿರೂಪಿಸಿದರು.







