ಉಡುಪಿ; ಸುಲ್ತಾನ್ ಡೈಮಂಡ್ಸ್ಆ್ಯಂಡ್ ಗೋಲ್ಡ್‌ನಿಂದ ಶಿಕ್ಷಕರಿಗೆ ಸನ್ಮಾನ

ಉಡುಪಿ, ಸೆ.5: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖೆ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಸೋಮವಾರ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಸನ್ಮಾನಿಸಲಾಯಿತು.
ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಶಿಕ್ಷಕರಾದ ರಂಜಿತಾ, ರಾಜೇಂದ್ರ, ದೀಪ್ತಿ, ಕಿಶೋರ್ ಶೆಟ್ಟಿ ಅವರನ್ನು ಸುಲ್ತಾನ್ ಗ್ರೂಪ್‌ನ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್ ಸನ್ಮಾನಿಸಿ ಶುಭಹಾರೈಸಿದರು.
ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಕೋ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಕೆ. ಮಾತನಾಡಿ, ಸುಲ್ತಾನ್ ಸಂಸ್ಥೆಯು ವ್ಯವಹಾರದ ಜೊತೆ ಸಾಮಾಜಿಕ ಕಾರ್ಯ ದಲ್ಲೂ ತೊಡಗಿಸಿಕೊಂಡಿದೆ. ಗ್ರಾಹಕ ಸ್ನೇಹಿಯಾಗಿ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯು ಮುಂದೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸ್ಕೂಲ್‌ನ ಟ್ರಾನ್ಸ್‌ಪೋರ್ಟ್ ಮೆನೇಜರ್ ರಾಜೇಶ್ ವೈ., ಸುಲ್ತಾನ್ ಸಂಸ್ಥೆಯ ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ಮುಹಮ್ಮದ್ ಶಾಮೀಲ್ ಖಾದರ್ ಉಪಸ್ಥಿತರಿದ್ದರು.





