ಪಡುಬಿದ್ರೆ: ಯೂತ್ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆ; ಸಯ್ಯದ್ ಶಫೀಯುಲ್ಲಾಗೆ ಗೌರವ

ಪಡುಬಿದ್ರೆ: ಯೂತ್ ಫೌಂಡೇಶನ್ ಪಡುಬಿದ್ರಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಪಡುಬಿದ್ರಿ ಏಡೆಡ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಯ್ಯದ್ ಶಫಿಯುಲ್ಲ ಅವರನ್ನು ಉರ್ದು ಶಾಲೆಯ ಸಭಾಂಗಣದಲ್ಲಿ ಗೌರವಿಸಲಾಯಿತು.
ಯೂತ್ ಫೌಂಡೇಶನ್ ಪಡುಬಿದ್ರಿ ಅಧ್ಯಕ್ಷ ಅಶ್ರಫ್ ಕಾಡಿಪಟ್ಣ ಅಧ್ಯಕ್ಷತೆ ವಹಿಸಿದ್ದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬುಡಾನ್ ಸಾಹೇಬ್, ಗ್ರಾಮ ಪಂಚಾಯತ್ ಸದಸ್ಯ ರಮೀಝ್ ಹುಸೈನ್, ಯೂತ್ ಫೌಂಡೇಶನ್‍ನ ಅಬ್ದುಲ್ ಹಮೀದ್, ಶಿಕ್ಷಕಿ ಪ್ರಮೀಳಾ ಉಪಸ್ಥಿತರಿದ್ದರು.
Next Story