ಮಂಗಳೂರು; ಡಿವೈಡರ್‌ಗೆ ಢಿಕ್ಕಿ: ಬೈಕ್ ಸವಾರ ಮೃತ್ಯು

ಮಂಗಳೂರು, ಸೆ.5: ನಗರದ ಕುಂಟಿಕಾನದ ಬಳಿ ಡಿವೈಡರ್‌ಗೆ ಬೈಕ್ ಢಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಮೂಲತಃ ತಮಿಳುನಾಡಿನ ಪ್ರಸ್ತುತ ನಗರದಲ್ಲಿ ಸಾಫ್ಟ್‌ವೇರ್ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಕಾರ್ತಿಕೇಯನ್ (31) ಮೃತಪಟ್ಟ ಬೈಕ್ ಸವಾರ.
ದೇರೆಬೈಲ್‌ನಲ್ಲಿ ಇವರು ವಾಸವಾಗಿದ್ದು, ರವಿವಾರ ತಡರಾತ್ರಿ ಮನೆಯಿಂದ ಬಿಜೈ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೊದ ತಿರುವು ರಸ್ತೆಯ ಬಳಿ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಢಿಕ್ಕಿಯಾಯಿತು. ಗಂಭೀರ ಗಾಯಗೊಂಡ ಕಾರ್ತಿಕೇಯನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸುಮಾರು 2.30ಕ್ಕೆ ಮೃತಪಟ್ಟಿರುವ ಬಗ್ಗೆ ವೈದ್ಯರು ಘೋಷಿಸಿದ್ದಾರೆ ಎಂದು ಸಂಚಾರ ಪಶ್ಚಿಮ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story