ಬೆಂಗಳೂರು: ವಿದ್ಯುತ್ ಸ್ಪರ್ಶಿಸಿ ಯುವತಿ ಮೃತ್ಯು

ಬೆಂಗಳೂರು(Bengaluru): ವಿದ್ಯುತ್ ಸ್ಪರ್ಶಿಸಿ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ.
23 ವರ್ಷದ ಅಖಿಲ ಸಾವನ್ನಪ್ಪಿದ್ದ ಯುವತಿ. ನಿನ್ನೆ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವೈಟ್ ಫೀಲ್ಡ್ ಠಾಣಾ ಪೊಲೀಸರು ತಿಳಿಸಿದ್ದಾರೆ.
ಮಾರತ್ ಹಳ್ಳಿ ಹಾಗೂ ವರ್ತೂರು ಮಧ್ಯಭಾಗದಲ್ಲಿರುವ ಸಿದ್ದಾಪುರದ ಮನೆಯೊಂದರಲ್ಲಿ ತಂದೆ-ತಾಯಿ ಜೊತೆ ವಾಸವಾಗಿದ್ದ ಅಖಿಲಾ, ಖಾಸಗಿ ಶಾಲೆಯೊಂದರಲ್ಲಿ ಉದ್ಯೋಗಿ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ನಿನ್ನೆ ರಾತ್ರಿ ಸ್ಕೂಟರ್ ನಲ್ಲಿ ಮನೆಗೆ ಹೋಗುವಾಗ ಮಳೆ ನೀರಿನಲ್ಲಿ ನಿಯಂತ್ರಣ ಸಿಗದೆ ಸಹಾಯಕ್ಕಾಗಿ ಪಾದಚಾರಿ ಮಾರ್ಗದ ವಿದ್ಯುತ್ ಕಂಬ ಮುಟ್ಟಿದ್ದಾರೆ. ಆದರೆ, ನೀರಿನಲ್ಲಿ ಬಿದ್ದಿದ್ದ ತಂತಿ ಮೂಲಕ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಘಟನೆಗೆ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದೇ ಇರೋದೇ ಸಾವಿಗೆ ಕಾರಣ ಆರೋಪಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





