ಉಚಿತ ನೇತ್ರ ತಪಾಸಣಾ ಶಿಬಿರ-ನೇತ್ರದಾನ ಪಾಕ್ಷಿಕ ಆಚರಣೆ

ಹಿರಿಯಡ್ಕ, ಸೆ.6: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿವಾರಣ ಘಟಕ, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ ಹಾಗೂ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಪಾಕ್ಷಿಕ ಆಚರಣೆಯನ್ನು ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಉದ್ಘಾಟಿಸಿದರು. ಉಡುಪಿ ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ನಿತ್ಯಾನಂದ ನಾಯಕ್, ಡಯಾಬಿಟಿಕ್, ರೆಟಿನೋಪತಿ, ಗ್ಲುಕೋಮ, ಕಣ್ಣಿನಪೊರೆ ದೃಷ್ಟಿ ದೋಷದ ಕುರಿತು ಹಾಗೂ ನೇತ್ರದಾನ ಪಾಕ್ಷಿಕದ ಬಗ್ಗೆ ಮಾಹಿತಿಯನ್ನು ನೀಡಿದರು.
ವೈದ್ಯಾಧಿಕಾರಿ ಡಾ.ಸತ್ಯ ಶಂಕರ್ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ವಿಜಯ ಬಾಯಿ ಕಾರ್ಯಕ್ರಮ ನಿರೂಪಿಸಿದರು. ತುಳಸಿ ಪೋಕಳೆ ವಂದಿಸಿದರು. ಫಾರ್ಮಸಿ ಅಧಿಕಾರಿಗಳಾದ ಅರ್ಚನಾ, ಶಾಮಲಾ, ಪ್ರಮೀಳಾ, ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು ಭಾಗವಹಿಸಿ, ಶಿಬಿರದ ಸದುಪಯೋಗ ವನ್ನು ಪಡೆದುಕೊಂಡರು.
Next Story





